ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 'ಎ' ಗ್ರೇಡ್ ಶ್ರೇಣಿ ಉಳಿಸಿಕೊಂಡ ಧಾರವಾಡದ ಕವಿವಿ

ಧಾರವಾಡ: ನ್ಯಾಕ್ 4ನೇ ಆವೃತ್ತಿಯಲ್ಲಿಯೂ ಸಹ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ’ಎ’ ಗ್ರೇಡ್ ಶ್ರೇಣಿಯನ್ನು ಉಳಿಸಿಕೊಂಡು ಸತತವಾಗಿ 4ನೇ ಸಲವೂ ‘ಎ’ ಗ್ರೇಡ್ ಉಳಿಸಿಕೊಂಡ ಹಿರಿಮೆಗೆ ಪಾತ್ರವಾಗಿದೆ ಎಂದು ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಹೇಳಿದರು.

ಕವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಎ ಗ್ರೇಡ್ ನ್ಯಾಕ್ ಮಾನ್ಯತೆ ಪಡೆದಿರುವ ಕುರಿತು ಅವರು ಮಾಹಿತಿ ನೀಡಿದರು.

ವಿಶ್ವವಿದ್ಯಾಲಯದ ಧನಸಹಾಯ ಆಯೋಗವು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಅಳೆಯಲು ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್‌ಯನ್ನು 1994ರಲ್ಲಿ ಸ್ಥಾಪಿಸಿದ್ದು, ಅಲ್ಲಿಂದೀಚೆಗೆ ಕರ್ನಾಟಕ ವಿಶ್ವವಿದ್ಯಾಲಯವು ಕಳೆದ ಮೂರು ಆವೃತ್ತಿಯಲ್ಲಿಯೂ ನಿರಂತರವಾಗಿ ‘ಎ’ ಶ್ರೇಣಿಯನ್ನು ಪಡೆಯುತ್ತಾ ಬಂದಿದೆ.

ಈ ಬಾರಿ 4ನೇ ಆವೃತ್ತಿಯಲ್ಲಿ ವಿಶ್ವವಿದ್ಯಾಲಯವು ಕಳೆದ ಐದು ವರ್ಷಗಳ ತನ್ನ ಶೈಕ್ಷಣಿಕ ಸಾಧನೆಯನ್ನು ಪರಿಶೀಲನೆಗಾಗಿ 2022 ಮಾ.15 ರಂದು ಮೌಲ್ಯಮಾಪನಕ್ಕಾಗಿ ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್‌ಗೆ ಸಾದರಪಡಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಕ್ ಪೀರ್ ತಂಡವು ಸೆ.29 ರಿಂದ ಅ.11ರವರೆಗೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ವಿಶ್ವವಿದ್ಯಾಲಯದ ‘ಭೌತಿಕ ಮತ್ತು ಬೌದ್ಧಿಕ ಮೌಲ್ಯಮಾಪನ ಮಾಡಿ ಸಮಿತಿಯು, ತನ್ನ ವರದಿಯಲ್ಲಿ ವಿಶ್ವವಿದ್ಯಾಲಯದ ಪತ್ಯೇತರ ಚಟುವಟಿಕೆ, ಬೋಧನೆ, ಮೌಲ್ಯಮಾಪನ, ಸಂಶೋಧನೆ, ಮೂಲಭೂತ ಸೌಕರ್ಯ, ವಿದ್ಯಾರ್ಥಿಗಳ ಸಹಕಾರ ಮತ್ತು ಪ್ರಗತಿ, ಆಡಳಿತ ಇತ್ಯಾದಿ ವಿಷಯಗಳ ಕುರಿತು ವರದಿಯನ್ನು ನ್ಯಾಕ್ ಕಚೇರಿಗೆ ಸಲ್ಲಿಸಿತ್ತು. ಈ ವರದಿ ಅನ್ವಯ ಇದೀಗ ಎ ಗ್ರೇಡ್ ಸಿಕ್ಕಿದೆ ಎಂದರು.

ಕವಿವಿ ಅಂತರ್‌ ರಾಷ್ಟ್ರೀಯ ವಿಶ್ವವಿದ್ಯಾಲಯಗಳೊಂದಿಗೆ ಮತ್ತು ದೇಶದ ಅನೇಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದ್ದು, ಈ ನಿಯಮಗಳಡಿಯಲ್ಲಿ ವಿದ್ಯಾರ್ಥಿಗಳು ಎರಡು ಸಂಸ್ಥೆಗಳ ಸಹಭಾಗಿತ್ವದಲ್ಲಿ ಉನ್ನತ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿಕೊಟ್ಟಿದೆ. ಆಧುನಿಕತೆಯ ಬದಲಾವಣೆಗೆ ಅನುಗುಣವಾಗಿ ಕವಿವಿಯಲ್ಲಿ ಬಹುವಿವಿಧ ವಿಷಯಗಳ ಪದವಿಯನ್ನು ಆರಂಭಿಸಲಾಗುವುದು.

ಮೆಡಿಕಲ್, ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಹೊಸ ಕೋರ್ಸ್‌ಗಳ ಆರಂಭಕ್ಕೆ ಇದೀಗ ಅವಕಾಶ ಸಿಕ್ಕಿದೆ. ಹೀಗಾಗಿ ಹೊಸ ಕೋರ್ಸ್ ಆರಂಭ ಮಾಡುವ ಬಗ್ಗೆ ಚಿಂತನೆ ಸಾಗಿದೆ. ಸ್ಕೂಲ್ ಆಫ್ ಫಾರ್ಮಸಿಟಿಕಲ್ ಸೈನ್ಸ್, ಸೆಂಟರ್ ಫಾರ್ ನ್ಯಾನೋ ಟೆಕ್ನಾಲಜಿ, ಆರ್ಟಿಫಿಸಿಯಲ್ ಇಂಟಲಿಜನ್ಸ್, ಡಾಟಾಸೈನ್ಸ್ ಸೇರಿದಂತೆ ಹಲವಾರು ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸಂಶೋಧನೆ ಹಾಗೂ ಅಭಿವೃದ್ಧಿ ಕುರಿತಂತೆ ಹಲವಾರು ಖಾಸಗಿ ಕಂಪೆನಿಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಹಲವಾರು ಉದ್ಯಮಗಳ ಹಾಗೂ ತಜ್ಞರ ನಡುವಿನ ಮಧ್ಯದ ಕೊರತೆ ನೀಗಿಸಲು ವಿವಿಧ ಕಂಪನಿಗಳ ಜತೆಯೂ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಡಿಜಿಟಲ್ ಲೈಬ್ರರಿ, ಪ್ರಾಣಿಮಾನೆ ಸೇರಿದಂತೆ ಸಂಶೋಧನಾ ಅಭಿವೃದ್ಧಿ ಕೋಶ ಸ್ಥಾಪಿಸಲಾಗುತ್ತಿದೆ. ವಿವಿಧ ಅಧ್ಯಯನ ಪೀಠಗಳು ಸಹ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

Edited By : Nagesh Gaonkar
Kshetra Samachara

Kshetra Samachara

12/10/2022 07:59 pm

Cinque Terre

27.71 K

Cinque Terre

0

ಸಂಬಂಧಿತ ಸುದ್ದಿ