ಹುಬ್ಬಳ್ಳಿ: ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್ ಪಾಟೀಲ ವಾಣಿಜ್ಯ ಪದವಿ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ 2021-22 ನೇ ಸಾಲಿನ ಬಿ ಕಾಂ, ಎಂ ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ ಗೌಡಪ್ಪಗೊಳ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅದೆಷ್ಟೋ ಜನ ನ್ಯೂನ್ಯತೆ ಇದ್ದರು ಸಹಿತ ಅದ್ಬುತ ಸಾಧನೆ ಮಾಡಿದ ಉದಾಹರಣೆ ನಮ್ಮ ಮುಂದಿವೆ ಅಂತಹವರನ್ನು ಮಾದರಿಯಾಗಿಟ್ಟುಕೊಂಡು ಸತತ ಕ್ರಿಯಾಶೀಲರಾಗಬೇಕು ಮತ್ತು ಗುರಿಯತ್ತ ನಮ್ಮ ಪಯಣ ಸಾಗುತ್ತಿರಲಿ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕಷ್ಟ ಸಹಿಷ್ಣುಗಳಾಗಿ ಬದುಕು ರೂಪಿಸಿಕೊಳ್ಳಿ ಎಂದರು.
ನಂತರ ಮಾತನಾಡಿದ ಸಂಘದ ಗೌರವ ಕಾರ್ಯದರ್ಶಿ, ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಆರ್ ಕೆ ಪಾಟೀಲರು ವಿದ್ಯಾರ್ಥಿಗಳು ಕಲಿಯುವ ಸಂಧರ್ಭದಲ್ಲಿ ಕಲಿಕೆಯತ್ತ ಮಾತ್ರ ಗಮನ ಹರಿಸಬೇಕು ಬಾಹ್ಯ ಆಕರ್ಷಣೆಗಳಿಗೆ ಒಳಗಾಗದೆ ಅಧ್ಯಯನಶೀಲರಾಗಿ, ನಿಮ್ಮ ಮೇಲಿನ ಜವಾಬ್ದಾರಿ ಬಹಳಷ್ಟಿದೆ ಅದನ್ನು ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ ಕಲಿಸಿದ ಗುರುಗಳನ್ನು ಗೌರವಿಸಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್ ಬಿ ಸಣಗೌಡರ ತಮ್ಮ ಅದ್ಯಕ್ಷೀಯ ನುಡಿಯಲ್ಲಿ ಯುವಕರಾದ ತಾವು ಸೋಮಾರಿಗಳಾಗದೆ ತಮ್ಮ ಸಾಮರ್ಥ್ಯವನ್ನು ಅರಿತು ಮುನ್ನಡೆಯಬೇಕು. ಪ್ರಯತ್ನವಿಲ್ಲದ ಗೆಲುವು ಕೂಡ ಸೋಲಿಗೆ ಸಮ ಪ್ರಯತ್ನವಿದ್ದ ಸೋಲು ಸೋಲಲ್ಲ ಎಂದರು.
ಶೈಕ್ಷಣಿಕ ವರ್ಷದ ಕ್ರೀಡೆ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಗೆದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಉಪನ್ಯಾಸಕ ರವಿ ದೊಡ್ಡಬಿದರಿ ನಡೆಯಿಸಿಕೊಟ್ಟರು, ಉಪನ್ಯಾಸಕಿ ಶ್ರೀಮತಿ ವೇಧಾ ಹುಡೇದ ವಾರ್ಷಿಕ ವರದಿ ಒಪ್ಪಿಸಿದರು, ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳೆಂದು ಆಯ್ಕೆಯಾದ ಬಿ.ಕಾಂ ವಿಭಾಗದ ಕುಮಾರ ಮಂಜುನಾಥ ಬುರ್ಲಗಟ್ಟಿ ಕುಮಾರಿ ಅಕ್ಷತಾ ನಾಯ್ಕರ್ ಎಂ ಕಾಂ ವಿಭಾಗದ ಕುಮಾರಿ ಶ್ರೀಲಕ್ಷ್ಮಿ ಮೊಕಾಶಿ ವಿದ್ಯಾರ್ಥಿಗಳನ್ನು ಪಾರಿತೋಷಕ ನೀಡಿ ಪ್ರೋತ್ಸಾಹಿಸಲಾಯಿತು.
ಕಾಲೇಜು ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ ಕಿರೆಸೂರ್ ಸ್ವಾಗತಿಸಿದರು, ಉಪನ್ಯಾಸಕ ಶ್ರೀ ಪವನ್ ಧಮಾಮ್ ವಂದಿಸಿದರು, ಉಪನ್ಯಾಸಕಿ ಪ್ರಿಯಾಂಕಾ ನವಲಗುಂದ ಹಾಗೂ ಗ್ರಂಥಾಪಾಲಕ ಗುರು ಹಂಜಗಿಮಠ ಕಾರ್ಯಕ್ರಮ ನಿರೂಪಿಸಿದರು, ಸಂಘದ ಹಿತೈಷಿ ಎಚ್.ಎಚ್ ಕಿರೆಸೂರ್ ವಿಜ್ಞಾನ ವಿಭಾಗದ ಸಹಸಂಯೋಜಕ ಡಾ. ಶಿವರಾಮ್ ಪಾಟೀಲ ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರಿ ಮೇಘಾ ಅವಾರಿ ಕುಮಾರಿ ಶ್ರೀಲಕ್ಷ್ಮಿ ಮೊಕಾಶಿ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
17/08/2022 10:51 pm