ಧಾರವಾಡ: ಬೇಸಿಗೆ ರಜೆ ಕಳೆದು ಶಾಲೆಗಳು ಇಂದಿನಿಂದ ಆರಂಭಗೊಂಡಿವೆ. ಎಪ್ರಿಲ್, ಮೇ ತಿಂಗಳಲ್ಲಿ ರಜೆಯ ಮಜಾ ಮಾಡಿದ ಮಕ್ಕಳು ಇಂದಿನಿಂದ ಮತ್ತೆ ಶಾಲೆಯತ್ತ ಮುಖ ಮಾಡಿದ್ದಾರೆ.
ಮೇ.16 ರಿಂದ ರಾಜ್ಯದಾದ್ಯಂತ ಶಾಲಾ, ಕಾಲೇಜುಗಳ ಪುನರಾರಂಭಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ದಿನ ಮಕ್ಕಳು ಹುರುಪಿನಿಂದ ಶಾಲೆಗೆ ಬಂದಿದ್ದರು.
ಮಳೆ ಬಿಲ್ಲು ಎಂಬ ಹೆಸರಿನಡಿ ಶಾಲಾ, ಕಾಲೇಜಗಳ ಪುನರಾರಂಭಕ್ಕೆ ಚಾಲನೆ ನೀಡಲಾಗಿದೆ. ಇಂದು ಶಾಲೆಗೆ ಬಂದ ಮಕ್ಕಳನ್ನು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಸ್ವಾಗತಿಸಿದರು.
ಮಕ್ಕಳಿಗೆ ಹೂವು, ಚಾಕಲೇಟ್ ನೀಡಿ ಕೊನೆಗೆ ಕಳೆದ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಸನ್ಮಾನಿಸುವ ಮೂಲಕ ಶಾಲೆಗಳಿಗೆ ಸ್ವಾಗತ ಮಾಡಿಕೊಂಡರು.
Kshetra Samachara
16/05/2022 01:41 pm