ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಾ.ಚೆನ್ನವೀರ ಕಣವಿ ಹೆಸರಿನಲ್ಲಿ ಕವಿವಿ ಹಾಗೂ ಎಸ್‌ಡಿಎಂ ವಿವಿಯಲ್ಲಿ ಚಿನ್ನದ ಪದಕಗಳ ಸ್ಥಾಪನೆ

ಧಾರವಾಡ: ಕವಿ, ನಾಡೋಜ ದಿವಂಗತ ಡಾ.ಚೆನ್ನವೀರ ಕಣವಿ ಅವರ ನೆನಪಿಗಾಗಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಎಸ್‌ಡಿಎಂ‌ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಸ್ವರ್ಣ ಪದಕಗಳನ್ನು ಸ್ಥಾಪಿಸಲಾಗುವುದು ಎಂದು ಅವರ ಪುತ್ರ ಪ್ರಿಯದರ್ಶಿ ಕಣವಿ ತಿಳಿಸಿದ್ದಾರೆ.

ಕಳೆದ ಜನೆವರಿ 14 ರಿಂದ ಫೆ.16 ವರೆಗೆ ಡಾ.ಚೆನ್ನವೀರ ಕಣವಿ ಅವರು ತೀವ್ರ ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸಚಿವರಾದ ಹಾಲಪ್ಪ ಆಚಾರ್, ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೇರಿದಂತೆ ಎಸ್‌ಡಿಎಂ ಆಸ್ಪತ್ರೆಯ ನಿರ್ದೇಶಕರು, ವೈದ್ಯರು, ಸಿಬ್ಬಂದಿ ನೀಡಿದ ಸಹಕಾರ, ತುಂಬಿದ ನೈತಿಕ ಸ್ಥೈರ್ಯಕ್ಕೆ ಕುಟುಂಬ ಋಣಿಯಾಗಿದೆ.

ಚೆನ್ನವೀರ ಕಣವಿ ಅವರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲು ಘೋಷಿಸಿದ್ದರಿಂದ, ಅದಕ್ಕಾಗಿ ಕುಟುಂಬವು ಭರಿಸಲು ಸಿದ್ಧವಿದ್ದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ಸದ್ವಿನಿಯೋಗ ಮಾಡಲು ಉದ್ದೇಶಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭಾವಂತರನ್ನು ಪ್ರೋತ್ಸಾಹಿಸಲು ಕರ್ನಾಟಕ ವಿವಿ ಹಾಗೂ ಎಸ್‌ಡಿಎಂ ಡೀಮ್ಡ್ ವಿವಿಯಲ್ಲಿ ನಿಧಿ ಸ್ಥಾಪನೆ ಮಾಡಿ, ಸ್ವರ್ಣ ಪದಕಗಳನ್ನು ನೀಡಲು ಕುಟುಂಬದ ಸದಸ್ಯರು ತೀರ್ಮಾನಿಸಿದ್ದಾರೆ. ಕಣವಿ ಅವರ ಅನಾರೋಗ್ಯದ ಸಂದರ್ಭದಲ್ಲಿ ಅವರಿಗಾಗಿ ಮಿಡಿದ ನಾಡಿನ ಸಮಸ್ತ ಜನತೆಗೆ, ಮಾಧ್ಯಮಗಳಿಗೆ, ಮಠಾಧೀಶರಿಗೆ ಕೃತಜ್ಞತೆಗಳನ್ನು ಕುಟುಂಬ ತಿಳಿಸಿದೆ.

Edited By : Nagaraj Tulugeri
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/03/2022 08:27 pm

Cinque Terre

30.31 K

Cinque Terre

0

ಸಂಬಂಧಿತ ಸುದ್ದಿ