ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಹಳ್ಳಿಕೇರಿ ಗ್ರಾಮದ ಶಾಲೆಗಳಲ್ಲಿ ಎಸ್.ಡಿ.ಎಂ.ಸಿ. ಹಾಗೂ ಪಾಲಕರ ಸಭೆ

ಅಣ್ಣಿಗೇರಿ; ತಾಲೂಕಿನ ಹಳ್ಳಿಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಎಸ್.ಡಿ.ಎಂ.ಸಿ.ಸಭೆ ಹಾಗೂ ಮೂರನೇ ಪಾಲಕರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸರಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ವಿ. ಗಿರಡ್ಡಿಯವರು ಮುಖ್ಯ ಅತಿಥಿಗಳಾಗಿ ಸಂಜೀವರೆಡ್ಡಿ ಬಾಲರೆಡ್ಡಿ ಅತಿಥಿಗಳಾಗಿ ಎನ್.ಎಂ.ಭೋರಾಣಿ, ಡಾ.ಶ್ವೇತಾ, ಶೋಭಾ ಕುಲಕರ್ಣಿ ಆಗಮಿಸಿದ್ದರು.

ಇನ್ನೂ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಉಪನ್ಯಾಸಕರಾಗಿ ವ್ಹಿ.ಬಿ.ಹದ್ಲಿ, ಎನ್.ವ್ಹಿ.ನಾಯಕ್ ಆಗಮಿಸಿದ್ದರು.

ಸರಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯ ಕಾರ್ಯಕ್ರಮದ ಅಧ್ಯಕ್ಷರಾಗಿ ಹೆಚ್.ಬಿ.ಹಂಡಿ ಮುಖ್ಯ ಅತಿಥಿಗಳಾಗಿ ರೇಖಾ ಮಡಿವಾಳರ್,ಜಿ.ಎಸ್. ಛಬ್ಬಿ,ಸುರೇಶ ಚಂದರಗಿ, ಸುಭಾಸ್ ಮಳಲಿ, ಸಂಜೀವರೆಡ್ಡಿ ಬಾಲರೆಡ್ಡಿ ಆಗಮಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಎರಡು ಶಾಲೆಯ ಪಾಲಕರಿಗೆ ಶಾಲೆಯ ವತಿಯಿಂದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.ಪಾಲಕರು ಕ್ರೀಡೆಯಲ್ಲಿ ಪಾಲ್ಗೊಂಡು ಸಂತೋಷಪಟ್ಟರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕ-ಶಿಕ್ಷಕಿಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

04/02/2022 09:24 pm

Cinque Terre

14.06 K

Cinque Terre

0

ಸಂಬಂಧಿತ ಸುದ್ದಿ