ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅನಕ್ಷರಸ್ಥರ ಸಮೀಕ್ಷೆ ಸಾಕ್ಷರತೆಗೆ ಒತ್ತು - ಜಿ.ಎನ್.ಮಠಪತಿ

ಕುಂದಗೋಳ : ತಾಲೂಕು ಪಶುಪತಿಹಾಳ ಗ್ರಾಮ ಪಂಚಾಯಿತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2021-22 ನೇ ಸಾಲಿನ ಮೂಲ ಸಾಕ್ಷರತಾ ಕಾರ್ಯಕ್ರಮದಡಿ ಅನಕ್ಷರಸ್ಥರ ಸಮೀಕ್ಷೆ ಕಾರ್ಯಾಗಾರ ಜರುಗಿತು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎನ್. ಮಠಪತಿಯವರು ಕಾರ್ಯಕ್ರಮವನು ಉದ್ಘಾಟಿಸಿ, ಸಮೀಕ್ಷೆ ಮಾಡುವ ಶಿಕ್ಷಕರಿಗೆ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

ಸಾಕ್ಷರತೆ ಪವಿತ್ರ ಕೆಲಸ ವಯಸ್ಕರ ಶಿಕ್ಷಣ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಒಂದೇ ಅಡಿಯಲ್ಲಿ ರಾಜ್ಯಮಟ್ಟದಲ್ಲಿ ಆಡಳಿತ ಇರುವುದರಿಂದ ಹಾಗೂ ಈ ಇಲಾಖೆ ತಾಲೂಕು ಮಟ್ಟದಲ್ಲಿ ಕಚೇರಿ ಹಾಗೂ ನೌಕರರು ಇರದೇ ಇರುವುದರಿಂದ ಸ್ಥಳೀಯ ಶಿಕ್ಷಕರು, ಕಲಿಕಾ ಕೇಂದ್ರ. ಬೋಧಕರು ಹಾಗೂ ಸ್ವಯಂ ಸೇವಕರು, ಅನಕ್ಷರಸ್ಥ ಸರ್ವೆ ಮಾಡಲು ಸೂಚಿಸಿ ಅನಕ್ಷರಸ್ಥರು ಬಡತನದ ಹಿನ್ನೆಲೆಯಿಂದ ಆರ್ಥಿಕವಾಗಿ ಹಿಂದುಳಿದವರ ಬಾಳಿಗೆ ಅಕ್ಷರ ಕಲಿಸಿ ಅವರ ಬಾಳು ಬೆಳಕು ಮಾಡುವುದು ಕಲಿತವರ ಹೊಣೆ ಎಂದು ಮಾತನಾಡಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಮಾತನಾಡಿ, ಪರಿಶಿಷ್ಟ ಜಾತಿ ಪರಿಶಿಷ್ಟ ಜನಾಂಗ ಹಾಗೂ ಅತ್ಯಂತ ಹಿಂದುಳಿದ ವರ್ಗದ ಬಹುಸಂಖ್ಯಾತರ ಇರುವ ಗ್ರಾಮದಲ್ಲಿ ಅನಕ್ಷರಸ್ಥರು ಹೆಚ್ಚು ಇದ್ದು ಅಂತಹ ಗ್ರಾಮಗಳಲ್ಲಿ ಸಾಕ್ಷರತೆ ಕಾರ್ಯಕ್ರಮ ಅಳವಡಿಸಲಾಗಿದೆ ಹೆಸರು ಸಹಿ ಮಾಡಿದ ಮಾತ್ರಕ್ಕೆ ಸಾಕ್ಷರಸ್ಥರು ಎಂದು ತಿಳಿದುಕೊಂಡರೆ ದೊಡ್ಡ ತಪ್ಪು ಓದು-ಬರಹ ಬಂದರೆ ಮಾತ್ರ ಸಾಕ್ಷರಸ್ಥರು ಎಂದು ತಿಳಿಸಿದರು.

ಕಾರ್ಯಕ್ರಮ ಸಹಾಯಕ ಎಸ್.ಆರ್. ರಾಚಣ್ಣನವರು ಶಿಕ್ಷಕರಿಗೆ ಸಮೀಕ್ಷೆ ಕುರಿತು ತರಬೇತಿ ನೀಡಿದರು. ತರಬೇತಿಯನ್ನು ಶಾಲಾ ಶಿಕ್ಷಕರಾದ ಎನ್.ಎಂ. ಹಂಚಿನಾಳ, ಎ.ಆರ್. ಅಮಿತ್, ಅಶ್ವತ ಬೂದಿಹಾಳ ಹಾಗೂ ಟಿ.ಆಯ್. ಗೋಡಿ ರವರು ಪಡೆದುಕೊಂಡರು ಸಮೀಕ್ಷೆಯ ನೋಡಲ್ ಹೋಸಮನಿ, ಸಹಾಯಕ ನೋಡಲ್ ನಾವಿ ಹಾಗೂ ಸಿಆರ್‍ಪಿ ಕುರಟ್ಟಿಯವರು ಹಾಗೂ ಪ್ರಗು ಶ್ರೀ ಹುಣಸಿಮರದ, ಹಾಗೂ ಕಲಿಕಾ ಕೇಂದ್ರ. ಬೋಧಕರು ಹಾಗೂ ಸ್ವಯಂ ಸೇವಕರು, ಭಾಗವಹಿಸಿದ್ದರು. ಶಿಕ್ಷಕ ಎಸ್.ಸಿ. ಶಾನವಾಡ ಕಾರ್ಯಕ್ರಮ ನಿರ್ವಹಿಸಿದರು.

Edited By : PublicNext Desk
Kshetra Samachara

Kshetra Samachara

24/12/2021 11:36 am

Cinque Terre

6.68 K

Cinque Terre

0

ಸಂಬಂಧಿತ ಸುದ್ದಿ