ಹುಬ್ಬಳ್ಳಿ : ಡಿ.17 ಶುಕ್ರವಾರ ರಂದು ನಿಗದಿಯಾಗಿದ್ದ ಸಿ.ಟಿ.ಈ.ಟಿ ಪರೀಕ್ಷೆ ಮುಂದೂಡಲಾಗಿದ್ದರೂ ಪರೀಕ್ಷಾ ಮಂಡಳಿಯಿಂದ ಪರೀಕ್ಷಾರ್ಥಿಗಳಿಗೆ ಸೂಕ್ತ ಮಾಹಿತಿ ಹಾಗೂ ದಾಖಲೆ ನೀಡದ ಕಾರಣ ಪರೀಕ್ಷೆಗೇಂದು ದೂರದ ಊರಿಂದ ಹುಬ್ಬಳ್ಳಿ ನಗರಕ್ಕೆ ಆಗಮಿಸಿದ ಅಭ್ಯರ್ಥಿಗಳು ಪರೀಕ್ಷಾ ಮಂಡಳಿ ಶಪಿಸಿ ಮನೆ ಸೇರಿದ್ದಾರೆ.
ಹೌದು ! ಈ ಘಟನೆ ನಡೆದಿರುವುದು ಹುಬ್ಬಳ್ಳಿ ನಗರದ ಐಬಿಎಂಆರ್ ವಿಧ್ಯಾಲಮದಲ್ಲಿ ನಿನ್ನೆ ಬೆಳಂ ಬೆಳಿಗ್ಗೆ ಸಿ.ಟಿ.ಈ.ಟಿ ಪರೀಕ್ಷೆಯ ಹಾಲ್ ಟಿಕೆಟ್ ಹಿಡಿದು ಪರೀಕ್ಷಾ ಕೇಂದ್ರಕ್ಕೆ ಬಂದ ಅಭ್ಯರ್ಥಿಗಳು ಒಮ್ಮೆಲೇ ಪರೀಕ್ಷಾ ಕೊಠಡಿ ಮುಂದೆ ಎಕ್ಸಾಂ ಮುಂದೂಡಲಾಗಿದೆ ಎಂಬ ನಾಮ ಫಲಕ ನೋಡಿ ಶಾಕ್ ಆಗಿದ್ದಾರೆ.
ಬಳಿಕ ಪರೀಕ್ಷಾ ಕೊಠಡಿ ನಿರ್ವಾಹಕರ ಜೊತೆ ಮಾತಿನ ಚಕಮಕಿ ನಡೆಸಿ ಸ್ಥಳ ಬಿಟ್ಟು ಕದಲಿದ್ದು, ಈ ಬಗ್ಗೆ ಸಂಬಂಧಪಟ್ಟ ಪರೀಕ್ಷಾ ಮಂಡಳಿ ಉತ್ತರಿಸುವಂತೆ ಪರೀಕ್ಷಾರ್ಥಿ ಒಬ್ಬರ ಸಹೋದರ ರವಿ ಹಿರೇಮಠ ಪಬ್ಲಿಕ್ ನೆಕ್ಸ್ಟ್'ಗೆ ಘಟನೆ ವಿಡಿಯೋ ಕಳುಹಿಸಿ ಮನವಿ ಮಾಡಿದ್ದಾರೆ.
Kshetra Samachara
18/12/2021 03:22 pm