ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜ್ಞಾನ ಮಾದರಿ ಪ್ರಯೋಗಗಳ ಪ್ರದರ್ಶನ, ಶ್ರೀಸಾಯಿ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಡಿ.20ಕ್ಕೆ

ಧಾರವಾಡ: ಧಾರವಾಡದ ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಹೊಂಬೆಳಕು ಫೌಂಡೇಶನ್ ಇವರ ಸಹಯೋಗದೊಂದಿಗೆ ವಿಜ್ಞಾನ ಪ್ರಯೋಗ ಮಾದರಿಗಳ ವಸ್ತು ಪ್ರದರ್ಶನ ಹಾಗೂ ಶ್ರೀ ಸಾಯಿ ಯುವ ವಿಜ್ಞಾನಿ-೨೦೨೧ (ಉದಯೋನ್ಮುಖ ಪ್ರತಿಭೆ) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭವನ್ನು ಧಾರವಾಡದ ನೌಕರ ಭವನದಲ್ಲಿ ಡಿ.20 ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ವಿವಿಧ ಜಿಲ್ಲೆಗಳಿಂದ ಹಲವಾರು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಲು ಹೆಸರನ್ನು ನೋಂದಾಯಿಸಿದ್ದಾರೆ. ಇನ್ನೂ ಯಾವುದೇ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ ಮಹಾವಿದ್ಯಾಲಯದ ಕಚೇರಿಯಲ್ಲಿ ಹೆಸರನ್ನು ನೋಂದಾಯಿಸಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ 9743063322 ಈ ನಂಬರನ್ನು ಸಂಪರ್ಕಿಸಬಹುದು.

ಕಾರ್ಯಕ್ರಮವನ್ನು ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಪಾಲ್ಗೊಳ್ಳುವರು. ಸ್ಪರ್ಧೆಯ ನಿರ್ಣಾಯಕರಾಗಿ ಸಂಯೋಜಕರು ಪಿಯುಸಿ ವಿಜ್ಞಾನ ವಿಭಾಗ, ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಜಿ.ಎಸ್.ಮಳಿಮಠ ಅವರು ಭಾಗವಹಿಸಲಿದ್ದಾರೆ. ಡಾ.ಆರ್ ಜೆ ಮಹೇಶ, ಸಹಾಯಕ ಪ್ರಾಧ್ಯಾಪಕರು, ರಸಾಯನ ಶಾಸ್ತ್ರ ವಿಭಾಗ, ಜೆಎಸ್ಎಸ್ ಕಾಲೇಜು ಧಾರವಾಡ ಇವರು ಆಗಮಿಸಲಿದ್ದಾರೆ.

ಅದೇ ದಿನ ಸಂಜೆ ನಡೆಯುವ ಸಮಾರೋಪ ಸಮಾರಂಭ ಹಾಗೂ ಶ್ರೀಸಾಯಿ ಯುವ ವಿಜ್ಞಾನಿ ಪ್ರಶಸ್ತಿ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ.ಎಚ್ ನಾಗರಾಜ, ಕುಲಸಚಿವರು, (ಮೌಲ್ಯ ಮಾಪನ) ಕರ್ನಾಟಕ ವಿಶ್ವವಿದ್ಯಾಲಯ, ಹಾಗೂ ಬಸವರಾಜ ಎಸ್.ಕೊಣ್ಣೂರ ಅಭಿವೃದ್ಧಿ ಅಧಿಕಾರಿಗಳು, ಭಾರತೀಯ ಜೀವ ವಿಮಾ ನಿಗಮ, ಧಾರವಾಡ ಇವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವೀಣಾ ಬಿರಾದಾರ ವಹಿಸಲಿದ್ದಾರೆ.

Edited By : PublicNext Desk
Kshetra Samachara

Kshetra Samachara

17/12/2021 10:15 pm

Cinque Terre

3.01 K

Cinque Terre

1

ಸಂಬಂಧಿತ ಸುದ್ದಿ