ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಹುಲ್ಲೂರ: ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೋದಾಗಿ ಭರವಸೆ
ನವಲಗುಂದ : ನವಲಗುಂದದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ, ಮತ್ತು ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಅಭಿದಾ ಬೇಗಂ ಕೋಳೂರ ವಿರುದ್ಧ ವಿದ್ಯಾರ್ಥಿಗಳು ಇಂದು ಪ್ರತಿಭಟನೆಗಿಳಿದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ನವೀನ ಹುಲ್ಲೂರ ವಸತಿ ಶಾಲೆಯನ್ನು ಪರಿಶೀಲನೆ ನಡೆಸಿದರು.
ಇನ್ನು ವಸತಿ ಶಾಲೆಯನ್ನೊಮ್ಮೆ ಸಂಪೂರ್ಣ ಪರಿಶೀಲನೆ ನಡೆಸಿದ ನವೀನ ಹುಲ್ಲೂರ ಅವರು ಮುಖ್ಯೋಪಾಧ್ಯಾಯರಾದ ಅಭಿದಾ ಬೇಗಂ ಕೋಳೂರ ಅವರಿಂದ ಮಾಹಿತಿಯನ್ನು ಪಡೆದರು. ನಂತರ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಅವರು ಮುಖ್ಯೋಪಾಧ್ಯಾಯರಾದ ಅಭಿದಾ ಬೇಗಂ ಕೋಳೂರ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೋದಾಗಿ ವಿದ್ಯಾರ್ಥಿಗಳಿಗೆ ಭರವಸೆಯನ್ನು ಸಹ ನೀಡಿದರು.