ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗುರುತಿನ ಚೀಟಿ ಇದ್ದರವರಿಗೆ ಮಾತ್ರ ಕಾಲೇಜಿಗೆ ಎಂಟ್ರಿ! ಇದು ಬಿವಿಬಿ‌ ಕಾಲೇಜಿನ ಹೊಸ ರೂಲ್ಸ್

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ- ನಗರದ ಪ್ರತಿಷ್ಠತ ಕಾಲೇಜೊಂದು ಗುರುತಿನ ಚೀಟಿಯನ್ನು ಕಡ್ಡಾಯ ಮಾಡುವ ಮೂಲಕ ಕಾಲೇಜು ಕ್ಯಾಂಪಸ್ ನಲ್ಲಿ ಸಂಭವಿಸುವ ಅನಾವಶ್ಯಕ ಘಟನೆಗಳಿಗೆ ಬ್ರೇಕ್ ಹಾಕಿದೆ. ಈ ಮೂಲಕ ವಿದ್ಯಾರ್ಥಿಗಳ ರಕ್ಷಣೆ ಹಾಗೂ ಕಾಲೇಜಿನ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಗಮನ ಸಳೆದಿದೆ ಈ ಕಾಲೇಜು....

ಹೀಗೆ ಸೆಕ್ಯುರಿಟಿಗಳು ಪ್ರತಿಯೊಬ್ಬರ ಐಡಿ ಕಾರ್ಡನ್ನು ಚೆಕ್ ಮಾಡಿ, ಒಳಗೆ ಬೀಡುತ್ತಿರುವ ದೃಶ್ಯ ಕಂಡು ಬಂದಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜು. ಕ್ಯಾಂಪಸ್ ಅಂದ್ರೆ ಯುವಕರು, ಯುವತಿಯರು, ವೃದ್ದರು ಹಾಗೂ ಮಕ್ಕಳಿಗೆ ಅಚ್ಚುಮೆಚ್ಚು. ಬೆಳಗ್ಗೆ ವಾಕಿಂಗ್ ನಿಂದ ಹಿಡಿದು ರಾತ್ರಿ 10 ಗಂಟೆಯವರೆಗೂ ಕ್ಯಾಂಪಸ್ ಜನರಿಂದ ತುಂಬಿ ತುಳುಕುತ್ತಿತ್ತು. ಇದರಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಯಾರು, ಬೇರೆ ಕಾಲೇಜಿನವರು ಯಾರು, ಸಾರ್ವಜನಿಕರು ಯಾರು ಎಂದು ಗುರುತಿಸುವುದೇ ದೊಡ್ಡ ಸವಾಲಾಗಿತ್ತು. ಇದಕ್ಕೆ ಕಾಲೇಜು ಆಡಳಿತ ಮಂಡಳಿ ಬ್ರೇಕ್ ಹಾಕಿ, ಸಾರ್ವಜನಿಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಪಾಸ್ ನೀಡಿದೆ. ಪಾಸ್ ತೋರಿಸಿದವರಿಗೆ ಮಾತ್ರ ಒಳ ಪ್ರವೇಶಕ್ಕೆ ವ್ಯವಸ್ಥೆ ಮಾಡುವ ಮೂಲಕ ಅನಾವಶ್ಯಕ ತಿರುಗಾಡುವರಿಗೆ ಕಡಿವಾಣ ಹಾಕಿದೆ....

ಬಿವಿಬಿ ಕ್ಯಾಂಪಸ್‌ಗೆ ಭೇಟಿ ನೀಡುವವರಿಗೆ ಕ್ರೀಡಾಪಟುಗಳು, ವಾಕರ್ಸ್, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಗುರುತಿನ ಚೀಟಿಗಳನ್ನು ಕೆಎಲ್ಇ ಸೊಸೈಟಿ ನೀಡಲಿದ್ದು, ಅವರ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಕ್ಯಾಂಪಸ್ ಒಳಗೆ ಹೋಗುವ ವಾಕರ್ಸ್ ಸೇರಿದಂತೆ ಸಂದರ್ಶಕರ ಸಂಪರ್ಕ ವಿವರಗಳು ಮತ್ತು ಫೋಟೋಗಳನ್ನು ಸಂಗ್ರಹಿಸಲಾಗುತ್ತಿದೆ.

ಕೆಲವು ಯುವಕರು ಬೈಕು ರ್ಯಾಟಿಂಗ್, ವೀಲಿಂಗ್, ಕಾರುಗಳ ರೇಸಿಂಗ್ ಮಾಡುವ ಮೂಲಕ ಕಿರಿಕಿರಿಯನ್ನುಂಟು ಮಾಡುತ್ತಿದ್ದರು.‌ ಬೇರೆಯವರು ಕ್ಯಾಂಪಸ್ ನಲ್ಲಿ ಕ್ಷುಲಕ‌ ಕಾರಣಕ್ಕೆ ಹೊಡೆದಾಡಿಕೊಂಡಿದ್ದಾರೆ. ಹೀಗಾಗಿ ಕೆ ಎಲ್ ಇ ಆಡಳಿತ ಮಂಡಳಿ ಇವೆಲ್ಲವನ್ನೂ ತಡೆಗಟ್ಟಲು, 35 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಕಾರ್ಡ್‌ಗಳನ್ನು ನೀಡುತ್ತಿದ್ದು, ಇತರ ಕಾಲೇಜುಗಳ ವಿದ್ಯಾರ್ಥಿಗಳ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ‌. ಇನ್ನು ಕೆಲವು ಹಿರಿಯ ನಾಗರಿಕರು ಹಾಗೂ ಗಣ್ಯರಿಗೆ ಬೆಳಗ್ಗೆ ವಾಕ್ ಮಾಡಲು ಪಾಸ್ ನೀಡಲಾಗಿದೆ‌. ವಿದ್ಯಾನಗರ, ಲಿಂಗರಾಜ ನಗರ ಮತ್ತು ಉಣಕಲ್ ಕ್ರಾಸ್‌ನ 200 ಕ್ಕೂ ಹೆಚ್ಚು ನಿವಾಸಿಗಳು ಕಾರ್ಡ್ ಪಡೆದಿದ್ದು,‌ ಕ್ಯಾಂಪಸ್ ನ ಅಂದ ಹೆಚ್ಚಿಸುವುದರ ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಬಿವಿಬಿ ಕ್ಯಾಂಪಸ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ , ಕಾಲೇಜುಗಳು ಮತ್ತು ಹಾಸ್ಟೆಲ್‌ಗಳಿದ್ದು, ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಅಥವಾ ಸರ್ಕಾರ ನೀಡುವ ಯಾವುದೇ ಕಾರ್ಡ್‌ನಂತಹ ಐಡಿ ಪುರಾವೆಗಳನ್ನು ಹಾಗೂ ನಂಬರ್ ಸಂಗ್ರಹಿಸುವದರಿಂದ, ಯಾವುದೇ ತುರ್ತು ಅಥವಾ ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಸಹಕಾರಿಯಾಗಲಿದೆ. ಆಕಾಲೇಜು ಆಡಳಿತ ಮಂಡಳಿಯ ನಿರ್ಧಾರಕ್ಕೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.......!

Edited By : Nagesh Gaonkar
Kshetra Samachara

Kshetra Samachara

19/01/2021 06:21 pm

Cinque Terre

49.74 K

Cinque Terre

7

ಸಂಬಂಧಿತ ಸುದ್ದಿ