ಅಣ್ಣಿಗೇರಿ : ಕೊರೊನಾ ಅಟ್ಟಹಾಸದಿಂದ ಕಳೆದ ಹತ್ತು ತಿಂಗಳಿಂದ ಶಾಲೆಗಳು ಬಂದ್ ಆಗಿ ಇಂದು ಮರಳಿ ಆರಂಭವಾದ ಹಿನ್ನಲೆಯಲ್ಲಿ ತಾಲೂಕಿನಾಧ್ಯಂತ ವಿದ್ಯಾರ್ಥಿಗಳು ಖುಷಿ ಖುಷಿಯಾಗಿ ಕೊರೊನಾ ನಿಯಮಗಳನ್ನು ಪಾಲಿಸುವದರೊಂದಿಗೆ ಶಾಲೆಗಳ ಕಡೆ ಮುಖಮಾಡುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ನೇತೃತ್ವದಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಶಾಲೆಗೆ ಮೊದಲ ದಿನ ಬರುವ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಸ್ವಾಗತ ಮಾಡಿಕೊಳ್ಳುತ್ತಿರುವದು ನೋಡುಗರ ಕಣ್ಣಿಗೆ ಬಹು ಆನಂದಮಯವಾಗಿದೆ.
ತಾಲೂಕಿನಾಧ್ಯಂತ ಇಂದು ಆರಂಭವಾದ ಶಾಲಾ ಕಾಲೇಜುಗಳಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಹಾಜರಿದ್ದರು. ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿರುವದು ಶ್ಲಾಘನೀಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
Kshetra Samachara
01/01/2021 08:07 pm