ಕುಂದಗೋಳ : ಕೊರೊನಾ ಕಂಟಕದ ಕಾರಣದಿಂದಾಗಿ ನಿಶ್ಯಬ್ದವಾಗಿ ಕದ ತಟ್ಟಿದ್ದ ಶಾಲೆಗಳು ಹೊಸ ವರ್ಷಕ್ಕೆ ಹೊಸ ಹರುಷದಲಿ ಬಾಗಿಲು ತೆರೆದು ವಿದ್ಯಾರ್ಥಿಗಳನ್ನ ಸ್ವಾಗತಿಸುತ್ತಿವೆ.
ಈಗಾಗಲೇ ಶಾಲೆಗೆ ಆಗಮಿಸಿದ ಶಿಕ್ಷಕರನ್ನು ಕೋವಿಡ್ ಪರೀಕ್ಷೆ ಒಳಗಾಗಿದ್ದು, ಮಕ್ಕಳು ಸಹ ಕೋವಿಡ್ ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆಗೆ ಒಳಗಾಗಿ ಶುಭ್ರ ಸಮವಸ್ತ್ರದಲ್ಲಿ ಪಟ್ಟಣದ ಜೆ.ಎಸ್.ಎಸ್. ವಿಧ್ಯಾಪೀಠಕ್ಕೆ ಬಲಗಾಲನ್ನ ಇಟ್ಟಿದ್ದಾರೆ, ಶಿಕ್ಷಕರು ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತಿ ಆಸನಕ್ಕೊಬ್ಬರಂತೆ ಕೂರಿಸಿ ಪಾಠ ಬೋಧನೆ ಆರಂಭಿಸಿದ್ದಾರೆ.
Kshetra Samachara
01/01/2021 03:31 pm