ನವಲಗುಂದ : ಆರನೇ ತರಗತಿಯ ಮುರಾರ್ಜಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಈಗಾಗಲೇ ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಕೋವಿಡ್ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಾಗಿತ್ತು.
ಇನ್ನು ಪಟ್ಟಣದ ಮಾಡೆಲ್ ಹೈ ಸ್ಕೂಲ್ ಮತ್ತು ಶಂಕರ ಮಹಾ ವಿದ್ಯಾಲಯ ಗಳಲ್ಲಿ ಪರೀಕ್ಷೆ ಆಯೋಜನೆ ಮಾಡಲಾಗಿದ್ದು, ಇಂದು ನಡೆದ ಪ್ರವೇಶ ಪರೀಕ್ಷೆಯಲ್ಲಿ ಮಾಡೆಲ್ ಹೈ ಸ್ಕೂಲ್ ಕೇಂದ್ರದಲ್ಲಿ ಒಟ್ಟು 288 ವಿದ್ಯಾರ್ಥಿಗಳು ಪರೀಕ್ಷೆ ಬರೆಯ ಬೇಕಿತ್ತು. ಆದರೆ 285 ವಿದ್ಯಾರ್ಥಿಗಳು ಹಾಜರಾಗಿದ್ದು, 3 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇನ್ನು ಶಂಕರ ಮಹಾ ವಿದ್ಯಾಲಯಲ್ಲಿ 533 ವಿದ್ಯಾರ್ಥಿಗಳು ಬರೆಯ ಬೇಕಿದ್ದ ಪರೀಕ್ಷೆಗೆ 525 ವಿದ್ಯಾರ್ಥಿಗಳು ಹಾಜರಾಗಿ 8 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಟ್ಟಾರೆಯಾಗಿ ನವಲಗುಂದ ಪಟ್ಟಣದಲ್ಲಿನ ಎರಡೂ ಪರೀಕ್ಷಾ ಕೇಂದ್ರದಗಳಲ್ಲಿ ಒಟ್ಟು 821 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿತ್ತು. ಆದರೆ 810 ವಿದ್ಯಾರ್ಥಿಗಳು ಹಾಜರಾಗಿ 11 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ.
Kshetra Samachara
16/09/2021 02:45 pm