ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಪ್ರತಿಭೆ ಯಾರ ಸ್ವತ್ತು ಅಲ್ಲಾ; ಶಿವಾನಂದ ಮಲ್ಲಾಡದ

ನವಲಗುಂದ: ತಾಲ್ಲೂಕಿನ ನಾಗನೂರಿನ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸನ್ 2022-23 ನೇ ಸಾಲಿನ ನವಲಗುಂದ ಹಾಗೂ ಅಣ್ಣಿಗೇರಿ ಉರ್ದು ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡದ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿಡ ಅವರು, ಮಕ್ಕಳಲ್ಲಿ ಪ್ರತಿಭೆ ಕಾರಂಜಿ ತರ ಉಕ್ಕಿದಾಗ ಮಾತ್ರ ಅದು ಬೆಳಕಿಗೆ ಬರುತ್ತೆ ಆ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ ಪ್ರತಿಭೆ ಅನ್ನುವುದು ಯಾರ ಸ್ವತ್ತು ಅಲ್ಲಾ ಎಂದರು. ನಂತರ ನಾಗನೂರಿನ ಸರ್ಕಾರಿ ಶಾಲೆಗೆ ಇಪ್ಪತ್ತು ಸಾವಿರ ದೇಣಿಗೆಯನ್ನು ಉತ್ತರ ಕರ್ನಾಟಕ ಪರಿವರ್ತನ ಸಮುದಾಯದ ಅಧ್ಯಕ್ಷ ಮಾಬುಸಾಬ ಯರಗುಪ್ಪಿ ಅವರು ನೀಡಿದರು.

ಈ ಸಂದರ್ಭದಲ್ಲಿ ತಾಲೂಕಾ ನೌಕರರ ಸಂಘದ ಅಧ್ಯಕ್ಷ ಎ.ಬಿ ಕೊಪ್ಪದ, ಗುಡಿಸಾಗರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಿಬಾಯಿ ಜಂಗಣ್ಣವರ, ಉಪಾಧ್ಯಕ್ಷ ಎಸ್.ವಿ.ಹೊಳೆಯಣ್ಣವರ, ಗ್ರಾಮ ಪಂಚಾಯತಿ ಸದಸ್ಯರಾದ ಇಮಾಮಹುಸೇನ ಲಂಬೂನವರ, ದಾವಲಸಾಬ ವಲ್ಲೆಪ್ಪನವರ, ರುಖಿಯಾಬೇಗಂ ಕಮಲಶಾ, ನಜೀರಾಬೇಗಂ ದಿವಾನಸಾಬನವರ, ಪ್ರಧಾನ ಗುರುಗಳಾದ ಎಸ್.ಸಿ ಹೊಳೆಯಣ್ಣವರ, ಎಸ್.ಎಮ್ ಬೆಂಚಿಕೇರಿ, ಎ. ಆರ್.ಅಕ್ಕಿ, ಬಿ ವಿ ಅಂಗಡಿ, ವಿ. ಎಮ್ ಹಿರೇಮಠ್, ಎಸ್. ಎಚ್ ಹರಕುಣಿ, ಎ. ಎಮ್ ಮುಲ್ಲಾ, ಸದರಬಾಯಿ, ಝೆಡ ಎ.ಪಾರುಖಿ, ಡಬ್ಲೂ.ಎಸ್ ಪೀರಜಾದೆ, ಎಚ್. ಎಮ್ ಗುರಾಣಿ, ಎ.ಎಮ್ ಹೊರಪೇಟಿ, ಝೆಡ. ಎಸ್. ಖಂಡುನಾಯಕ, ಸಮಾಜ ಸೇವಕ ಶೌಕತಲಿ ಲಂಬೂನವರ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

22/09/2022 07:39 pm

Cinque Terre

11.88 K

Cinque Terre

0

ಸಂಬಂಧಿತ ಸುದ್ದಿ