ಧಾರವಾಡ : ಧಾರವಾಡ ಶಹರ ವ್ಯಾಪ್ತಿಯ ಸರಕಾರಿ ಪ್ರೌಢ ಶಾಲೆಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕಾ ಟಾಪರ್ಸ್ ವಿದ್ಯಾರ್ಥಿಗಳಿಗೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಲಯದ ಶಾಸಕರಾದ ಅರವಿಂದ ಬೆಲ್ಲದರವರು ಹುಬ್ಬಳ್ಳಿಯ ಗೃಹಕಚೇರಿಯಲ್ಲಿ ಲ್ಯಾಪ್‍ಟಾಪ್ ವಿತರಿಸಿದರು.
ಬಳಿಕ ಮಾತನಾಡಿದ ಅವರು ಸರ್ಕಾರದ ಪ್ರೋತ್ಸಾಹಕ ಯೋಜನೆಗಳು ಉತ್ಕಷ್ಟ ಸಾಧನೆಗೆ ಪ್ರೇರಕವಾಗಿವೆ. ಸರಕಾರಿ ಪ್ರೌಢ ಶಾಲೆಗಳಲ್ಲಿ ಓದಿ ಕೋವಿಡ್-19 ಸಂದರ್ಭದಲ್ಲಿಯೂ ಉತ್ತಮ ಸಾಧನೆ ಮಾಡಿ ಲ್ಯಾಪ್‍ಟಾಪ್ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.
ವಿದ್ಯಾರ್ಥಿನಿಯರಾದ ಕು.ಅಂಜಲಿ ಸಾಲಿಮಠ ಜಿಹೆಚ್‍ಎಸ್ ಆರ್.ಎನ್ ಶೆಟ್ಟಿ, ಕು.ಸಾದಿಯಾ ಮೊರಬ ಜಿಯುಹೆಚ್‍ಎಸ್ ನವಲೂರ, ಕು. ವತ್ಸಲಾ ಮಡಿವಾಳರ ಜಿಹೆಚ್‍ಎಸ್ ಆರ್.ಎನ್ ಶೆಟ್ಟಿ ಇವರಿಗೆ ಲ್ಯಾಪ್‍ಟಾಪ್ ನೀಡಿ ಅಭಿನಂದಿಸಲಾಯಿತು.
Kshetra Samachara
26/11/2020 09:43 am