ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನಾನೊಬ್ಬ ಬ್ಯಾರೆ ಸಾಲಿ ಮಾಸ್ತರ ಹೆದರಬ್ಯಾಡ್ರೀ ಎಂದ ಕ್ಷೇತ್ರ ಶಿಕ್ಷಣಾಧಿಕಾರಿ

ಕುಂದಗೋಳ : ಸರ್ಕಾರ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ವಿದ್ಯಾಗಮ ಯೋಜನೆಯನ್ನು ಜಾರಿಗೆ ತಂದಿದ್ದು ಪಟ್ಟಣದ ಶಂಭೋಲಿಂಗೇಶ್ವರ ದೇವಸ್ಥಾನದಲ್ಲಿ ಆರಂಭಗೊಂಡ ವಿದ್ಯಾಗಮ ತರಗತಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ‌.ಎನ್.ಮಠಪತಿ ಆಕಸ್ಮಿಕ ಬೇಟಿ ನೀಡಿ ಪರಿಶೀಲನೆ ನಡೆಸಿದರು. .

ಬಳಿಕ ಮಕ್ಕಳ ವಿದ್ಯಾಗಮ ತರಗತಿ ಮಕ್ಕಳ ವಿದ್ಯಾಭ್ಯಾಸ ಪರೀಕ್ಷಿಸಿ ಭಯಗೊಂಡ ಮಕ್ಕಳಿಗೆ ನಾನೊಬ್ಬ ಬ್ಯಾರೆ ಸಾಲಿ ಮಾಸ್ತರ ಹೆದರಬ್ಯಾಡ್ರೀ ಎಂದು ಮಕ್ಕಳಿಗೆ ಗಣಿತ ಲೆಕ್ಕ ಪ್ರಶ್ನೇ ಮಾಡಿ ಅವರಲ್ಲಿನ ಗೊಂದಲ ನಿವಾರಿಸಿ ಮತ್ತೊಂದು ಮಗುವಿಗೆ ಕನ್ನಡ ಅಕ್ಷರದ ಸಾಲನ್ನು ಓದಲು ಹೇಳಿ ತಪ್ಪನ್ನು ಸರಿಪಡಿಸಿ ಮಕ್ಕಳಿಗೆ ಪಾಠ ಭೊದನೆಯ ತಿಳಿ ಹೇಳಿ ಕಲಿಕೆಯ ಬಗ್ಗೆ ಭಯ ಪಡಬೇಡಿ ಎಂದರು ನಂತರ ಶಿಕ್ಷಕರ ಜೊತೆ ಸಮಾಲೋಚಿಸಿ ದೇವಸ್ಥಾನದಲ್ಲಿ ಇನ್ನು ಕಡಿಮೆ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸಿ ಅಗತ್ಯ ಬಿದ್ದಲ್ಲಿ ಮನೆ ಪಾಠ ಹೇಳಿಕೊಡಿ ಕೊರೊನಾ ಬಗ್ಗೆ ಜಾಗೃತಿ ವಹಿಸಿ ಎಂದರು.

Edited By : Manjunath H D
Kshetra Samachara

Kshetra Samachara

09/10/2020 02:26 pm

Cinque Terre

31.43 K

Cinque Terre

2

ಸಂಬಂಧಿತ ಸುದ್ದಿ