ಕಲಘಟಗಿ: ಮಹಾನವಮಿ ಬಂದರೆ ಸಾಕು ಮಹಿಳೆಯರಿಗೆ ಎಲ್ಲಿಲ್ಲದ ಸಡಗರ ಹಾಗೂ ಸಂಭ್ರಮ ಸುಮಾರು ಒಂಬತ್ತು ದಿನಗಳ ಕಾಲ ಮಹಿಳೆಯರು ಹಾಗೂ ಮಕ್ಕಳು ದಿನಕ್ಕೊಂದು ಬಣ್ಣದ ಬಟ್ಟೆಗಳನ್ನು ಧರಿಸಿಕೊಂಡು ಪೋಟೋಗಳನ್ನು ತೆಗೆಸಿಕೊಂಡು ಪತ್ರಿಕೆ ಹಾಗೂ ಸ್ಟೆಟಸ್ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಿ ಸಂತೋಷ ವ್ಯಕ್ತಪಡಿಸುತ್ತಾರೆ.
ಅದೇ ರೀತಿ ಕಲಘಟಗಿ ಪಟ್ಟಣದಲ್ಲಿ ಒಂಬತ್ತು ದಿನಗಳ ಕಾಲ ಮಹಿಳೆಯರು ಹಾಗೂ ಮಕ್ಕಳು ಮುಂಜಾನೆ ಬೇಗ ಎದ್ದು ಮಡಿಯಿಂದ ಆರತಿ ಹಿಡಿದು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ನಂತರ ಕಲಘಟಗಿ ಪಟ್ಟಣದ ಗ್ರಾಮದೇವಿ ಗುಡಿ ಹಾಗೂ ಮಹಾಲಕ್ಷ್ಮಿ ಗುಡಿಗಳಿಗೆ ಭೇಟಿ ನೀಡಿ ದರ್ಶನ ಪಡೆದರು.
ಕೊನೆಯ ದಿನದಂದು ಮಹಿಳೆಯರು ಬನ್ನಿ ಮರಕ್ಕೆ ಉಡಿತುಂಬುವುದರ ಮೂಲಕ ಮುತ್ತೈದೆಯರಿಗೆ ಉಡಿ ತುಂಬಿ ಸಂಭ್ರಮಿಸಿದ್ದಾರೆ.
ಇದೇ ವೇಳೆ ಮಹಿಳೆಯರು ಹಾಗೂ ಮಕ್ಕಳು ಒಂದು ಗೂಡಿಕೊಂಡು ದಾಂಡಿಯಾ ಹಾಗೂ ವಿವಿಧ ರೀತಿಯ ನೃತ್ಯ ಮಾಡುವುದರ ಮೂಲಕ ಈ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.
ವರದಿ: ಉದಯ ಗೌಡರ
Kshetra Samachara
04/10/2022 06:29 pm