ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಭಗತಸಿಂಗ್ ಮೂರ್ತಿ ಮೆರವಣಿಗೆ, ಆಕಾಂಕ್ಷಿಗಳು ಸುಮಾಗಮ

ಕುಂದಗೋಳ : ಭಗತಸಿಂಗ್ ಜನ್ಮದಿನದ ಪ್ರಯುಕ್ತ ಇಲ್ಲೊಂದು ಯುವ ಸೇನೆ ಸ್ವಾತಂತ್ರ್ಯ ಸೇನಾನಿಗಳ ಭಗತಸಿಂಗ್, ರಾಜಗುರು, ಸುಖದೇವ ಪ್ಲಾಸ್ಟರ್ ಮೂರ್ತಿಯನ್ನು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಉಧ್ವಾಟನೆ ಮಾಡಿದ್ದಾರೆ.

ಕುಂದಗೋಳ ಪಟ್ಟಣದ ಯುವಕರೇ ಇಂತಹದ್ದೊಂದು ಕಾರ್ಯ ಮಾಡಿದ್ದು ಶಿಥಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಹಾಂತಯ್ಯ ಸ್ವಾಮೀಜಿ, ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರ ದಿವ್ಯ ಸಾನಿಧ್ಯದಲ್ಲಿ ಮೂರ್ತಿ ಅನಾವರಣ ಮಾಡಿ ಡಿಜೆ ಮೇಳದಲ್ಲಿ ಕೇಸರಿ ಧ್ವಜಗಳ ಹಾರಾಟದಲ್ಲಿ ಮೆರವಣಿಗೆ ಮಾಡಲಾಯಿತು.

ಇನ್ನೂ ಈ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಹಾಲಿ ಕೃಷಿ ಉತ್ಪನ್ನ ಮತ್ತು ರಫ್ತು ನಿಗಮ ಮಂಡಳಿ ಅಧ್ಯಕ್ಷ ಎಸ್.ಐ.ಚಿಕ್ಕನಗೌಡರ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಆರ್.ಪಾಟೀಲ, ಕಾಂಗ್ರೆಸ್ ಮುಖಂಡ ಶಿವಾನಂದ ಬೆಂತೂರ, ಜೆಡಿಎಸ್ ನಿಯೋಜಿತ ಅಭ್ಯರ್ಥಿ ಹಜರತ್'ಅಲಿ ಜೋಡಮನಿ ಭಾಗಿಯಾಗಿ ಕಾರ್ಯಕ್ರಮಕ್ಕೆ ಸಾಥ್ ನೀಡಿ, ಅನ್ನಸಂತರ್ಪಣೆಗೆ ಚಾಲನೆ ನೀಡಿ ಕೇಸರಿ ಧ್ವಜ ಹಾರಿಸಿ ಸಂಭ್ರಮಿಸಿದರು.

ಇನ್ನೂ 2023ರ ಚುನಾವಣೆ ಹೊಸ್ತಿಲಲ್ಲಿ ಎಲ್ಲ ಆಕಾಂಕ್ಷಿಗಳು ಒಂದೇ ವೇದಿಕೆಯಲ್ಲಿ ಕಂಡಿದ್ದಲ್ಲದೇ ಪರಸ್ಪರರು ಒಂದಾಗಿ ಯಶಸ್ವಿಯಾಗಿ ಕಾರ್ಯಕ್ರಮ ನೆರವೇರಿಸಿದ್ದು, ಅನ್ನಸಂತರ್ಪಣೆ ಸೇವಿಸಿ, ತಮ್ಮಿಷ್ಟದ ಅಭಿಮಾನಿಗಳ ಜೊತೆ ಪೋಟೋ ಕ್ಲಿಕ್ಕಿಸಿಕೊಂಡು ಮೆರವಣಿಗೆ ಯಶಸ್ವಿ ಸಹ ಮಾಡಿದರು. ಬಳಿಕ ಕುಂದಗೋಳ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೂರ್ತಿ ತೆರೆದ ವಾಹನದಲ್ಲಿ ಸಂಚರಿಸಿತು.

Edited By : Manjunath H D
Kshetra Samachara

Kshetra Samachara

28/09/2022 09:12 pm

Cinque Terre

25.07 K

Cinque Terre

0

ಸಂಬಂಧಿತ ಸುದ್ದಿ