ನವಲಗುಂದ : ಗಣೇಶ ನ ರಥೋತ್ಸವ ಅಂದ್ರೆ ತಟ್ಟನೆ ನೆನಪಾಗೋದು ಕರ್ನಾಟಕದಲ್ಲಿ ಪ್ರಖ್ಯಾತಿ ಪಡೆದಿರುವ ಇಡಗುಂಜಿ. ಇಡಗುಂಜಿ ದೇವಸ್ಥಾನ ಹೊರತು ಪಡಿಸಿದರೆ ನವಲಗುಂದದಲ್ಲೆ ಅದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರುಗುವುದು.
ವಿಶೇಷತೆ ಅಂದ್ರೆ ಗಣಪತಿಯ ಪ್ರತಿಷ್ಠಾಪನೆ ನಂತರ ಪ್ರತಿ ದಿನ ಸತತ ಎಂಟು ದಿನಗಳವರೆಗೆ ವಾಹನೋತ್ಸವ ನಡೆಯುತ್ತೆ, ಮೊದಲ ದಿನ ಸಿಂಹ ವಾಹನ, ಎರಡನೇ ದಿನ ಮಯೂರ, ಮೂರನೇ ದಿನ ಮೂಷಿಕ ವಾಹನ, ನಾಲ್ಕನೇ ದಿನ ನಂದಿ, ಐದನೇ ದಿನ ಗಂಡಭೇರುಂಡ, ಆರನೇ ದಿನ ಗರುಡ, ಏಳನೇ ದಿನ ಗಜವಾಹನ, ಎಂಟನೇ ದಿನ ಕಮಲಾಸನಾರೂಢನಾಗಿ ಕಂಗೊಳಿಸುತ್ತಾನೆ.
ಕೊನೆಯದಾಗಿ ಒಂಭತ್ತನೇ ದಿನದಂದು ಅಂದರೆ ಇಂದು ರಥೋತ್ಸವ ನಿಮಿತ್ತ ಊರಿನ ಭಕ್ತರೆಲ್ಲ ಕರಿಗಡಬು ಸಿದ್ಧಪಡಿಸಿ ನೈವೇದ್ಯ ಅರ್ಪಿಸುತ್ತಾರೆ. ಅದನ್ನೇ ಪ್ರಸಾದವಾಗಿ ಅನ್ನಸಂತರ್ಪಣೆಯಲ್ಲಿ ವಿತರಿಸಲಾಗುತ್ತೆ, ಉತ್ಸವ ಗಣೇಶ ಮೂರ್ತಿಯನ್ನ ರಥೋತ್ಸವದಲ್ಲಿ ಮೆರವಣಿಗೆ ಮುಖಾಂತರ ನಗರದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬಂದ ಮೇಲೆ ಪೂಜೆ ಸಲ್ಲಿಸಿ, ನಂತರ ಗಣಪತಿ ಹಬ್ಬದ ಪ್ರಯುಕ್ತ ಇಟ್ಟ ಗಣೇಶ ಮೂರ್ತಿ ವಿಸರ್ಜನೆ ಮಾಡಿದ ನಂತರ ಉತ್ಸವ ಗಣೇಶ ಮೂರ್ತಿಯ ರಥೋತ್ಸವ ಮರಳಿ ದೇವಸ್ಥಾನಕ್ಕೆ ತಲುಪುತ್ತೆ.
Kshetra Samachara
08/09/2022 10:53 pm