ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಸಮಾಜಮುಖಿ ಕಾರ್ಯಗಳಲ್ಲಿ ಕೆ ಕೆ ಫೌಂಡೇಶನ್ ಸಾಧನೆ ಹಿರಿದು

ಧಾರವಾಡ : ಧಾರವಾಡ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಆರ್ ಕೆ ಪಾಟೀಲರ ಕೆ ಕೆ ಫೌಂಡೇಶನ್ ಸಮಾಜಮುಖಿ ಕಾರ್ಯಗಳಿಂದ ಗಮನಸೆಳೆಯುತ್ತಿದೆ.

ವಿಭಿನ್ನ ಆಲೋಚನೆ ಮತ್ತು ಗುರಿಯೊಂದಿಗೆ ಪ್ರಾರಂಭಗೊಂಡ ಫೌಂಡೇಶನ್ ಜನರ ಆರೋಗ್ಯ, ಕೃಷಿ, ಮಹಿಳಾ ಸಬಲೀಕರಣ, ಕೌಶಲ್ಯಾಭಿವೃದ್ಧಿಗೆ ಒತ್ತು ಕೊಟ್ಟು ಸ್ವಾವಲಂಬಿಗಳನ್ನಾಗಿಸುತ್ತ ಮುನ್ನಡೆದಿದೆ.

ಇದರಿಂದ ಆರ್ ಕೆ ಪಾಟೀಲರ ಜನಪರ ಕಾಳಜಿಗೆ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ಆಗಸ್ಟ್ 14 ರಿಂದ 18 ರ ವರೆಗೆ ಐದು ದಿನಗಳ ಕಾಲ ಧಾರವಾಡ ಪಶ್ಚಿಮ ವಿಧಾನಸಭಾ- 74 ರ ಕ್ಷೇತ್ರ ವ್ಯಾಪ್ತಿಯ ಚನ್ನಬಸವೇಶ್ವರ ನಗರದ ಲಿಂಗಾಯತ ಸಭಾ ಭವನದಲ್ಲಿ ಉಚಿತ ಯೋಗ ತರಬೇತಿ ಮತ್ತು ಮನೆಮದ್ದು ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಶಿಬಿರದಲ್ಲಿ ನೂರಾರು ಜನ ಶಿಬಿರರ್ಥಿಗಳಾಗಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡಿದ್ದಾರೆ ಇಂದು ಆಗಸ್ಟ್ 18 ರ ಮುಂಜಾನೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ರಾಜಕೀಯ ಮುಖಂಡರು ಹಾಗೂ ಲಿಂಗಾಯತ ಸಭಾ ಭವನದ ಅಧ್ಯಕ್ಷ ಗುರುರಾಜ ಹುಣಸಿಮರದ ಆಗಮಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಆರ್ ಕೆ ಪಾಟೀಲರು ಸಹಕಾರಿ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸಿದ್ದಾರೆ.

ಸದ್ಯ ಅವರು ಫೌಂಡೇಶನ್ ಸ್ಥಾಪಿಸಿ ಜನಕ್ಕೆ ಸೇವೆ ಸಲ್ಲಿಸುವ ಉದ್ದೇಶದಿಂದ ಮುನ್ನೆಲೆಗೆ ಬಂದಿರುವುದು ನಮ್ಮ ಅದೃಷ್ಟ ಎಂದರು.

ನಂತರ ಮಾತನಾಡಿದ ಆರ್ ಕೆ ಪಾಟೀಲರು ಸಮಾಜ ನಮಗೆ ಬಹಳಷ್ಟು ನೀಡಿದೆ. ನಾವು ಸಮಾಜದ ಅವಶ್ಯಕತೆಗೆ ತಕ್ಕಂತೆ ಕೆಲಸ ಮಾಡಬೇಕು ಅಂದಾಗ ಮಾತ್ರ ನಮ್ಮ ಜನ್ಮ ಸಾರ್ಥಕ, ರಾಜಕೀಯವಾಗಿ ಕೆಲವೊಂದು ಕೆಲಸ ಕಾರ್ಯಗಳನ್ನು ಮಾಡಲಾಗುವುದಿಲ್ಲ ಅಂತಹ ಕಾರ್ಯ ನಿರ್ವಹಣೆಗೆ ನಮ್ಮ ಕೆ ಕೆ ಫೌಂಡೇಶನ್ ನೆರವಾಗುತ್ತದೆ.

ವಿಶ್ವವೇ ಯೋಗವನ್ನು ಒಪ್ಪಿಕೊಂಡಿದೆ. ನಾವು ನಮ್ಮ ಕೆಲಸದ ಒತ್ತಡದಲ್ಲಿ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ತೋರುತ್ತಿದ್ದೇವೆ. ನಿಯಮಿತವಾಗಿ ಯೋಗ ಮಾಡಿ ಅರೋಗ್ಯವಂತರಾಗಬೇಕು. ಮನೆಯಲ್ಲಿಯೇ ಔಷಧಿ ಇದೆ, ಅದನ್ನು ಅರಿತುಕೊಳ್ಳಬೇಕು ಅದಕ್ಕಾಗಿ ಇಂತಹ ಕಾರ್ಯ ಕೈಗೊಂಡಿದ್ದೇನೆ ಎಂದರು.

ವೀರಶೈವ ಮಹಾಸಭಾ ತಾಲೂಕಾ ಘಟಕದ ಅಧ್ಯಕ್ಷ ಎಂ ಎಫ್ ಹಿರೇಮಠ ಯೋಗ ಗುರು ಮುತ್ತಪ್ಪ ನಲವಡಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು ಆರ್ ಕೆ ಪಾಟೀಲರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

18/08/2022 02:38 pm

Cinque Terre

10.37 K

Cinque Terre

0

ಸಂಬಂಧಿತ ಸುದ್ದಿ