ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 75 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ಮಧ್ಯರಾತ್ರಿ ಹಾರಿತು ರಾಷ್ಟ್ರಧ್ವಜ

ಧಾರವಾಡ: ಧಾರವಾಡ ಮಹಾನಗರಪಾಲಿಕೆ ಕಚೇರಿ ಆವರಣದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸ್ಥಾಪಿಸಲಾಗಿರುವ 75 ಅಡಿ ಎತ್ತರದ ಬೃಹತ್ ಧ್ವಜಸ್ತಂಭ ಆ.14 ರ ಮಧ್ಯರಾತ್ರಿ 12 ಗಂಟೆಗೆ ಅನಾವರಣಗೊಂಡಿತು.

ಬಾನೆತ್ತರಕ್ಕೆ ಭಾರತದ ಹೆಮ್ಮೆಯ ತಿರಂಗಾ ತಲುಪಿದಾಗ ಅಲ್ಲಿ ಸೇರಿದ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಮೇಯರ್ ಈರೇಶ ಅಂಚಟಗೇರಿ ಧ್ವಜಾರೋಹಣ ನೆರವೇರಿಸಿದರು. ಉಪಮೇಯರ್ ಉಮಾ ಮುಕುಂದ್, ಆಯುಕ್ತ ಡಾ.ಬಿ.ಗೋಪಾಲಕೃಷ್ಣ ಸೇರಿದಂತೆ ಪಾಲಿಕೆಯ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗ, ಸಾರ್ವಜನಿಕರು ನಡುರಾತ್ರಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿ ದೇಶ ಪ್ರೇಮ ಮೆರೆದರು.

Edited By : Manjunath H D
Kshetra Samachara

Kshetra Samachara

15/08/2022 10:53 am

Cinque Terre

25.24 K

Cinque Terre

0

ಸಂಬಂಧಿತ ಸುದ್ದಿ