ಕುಂದಗೋಳ : ಆಜಾದಿ ಕಾ ಅಮೃತ ಮಹೋತ್ಸವ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲೆಡೆ ಭರದ ಸಿದ್ಧತೆ ನಡೆದಿದ್ದು, ಅದರಂತೆ ಈ ಬಾರಿ ಕುಂದಗೋಳ ತಾಲೂಕಿನಲ್ಲಿ 75 ಅಡಿ ಎತ್ತರದ ಧ್ವಜ ಸ್ತಂಭ ಅನಾವರಣಗೊಳ್ಳಲಿದೆ.
ಧಾರವಾಡ ಜಿಲ್ಲೆಯಲ್ಲೇ ಗ್ರಾಮೀಣ ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಎಂಬಂತೆ, ಕುಂದಗೋಳ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು ಇಂತಹ ಹೆಮ್ಮೆಯ ಸಾಧನೆಗೆ ಮುಂದಾಗಿದ್ದು, ಈಗಾಗಲೇ 75 ಅಡಿ ಧ್ವಜ ಚೈನೈನಲ್ಲಿ ಸಿದ್ಧವಾಗಿ ಶೀಘ್ರವೇ ಕುಂದಗೋಳ ಪಟ್ಟಣ ತಲುಪಲಿದೆ.
ಈ ಧ್ವಜವನ್ನು ಪಟ್ಟಣ ಪಂಚಾಯಿತಿ ಸರ್ವ ಸದಸ್ಯರ ನಿರ್ಧಾರದಂತೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಕೆರಯಂಗಳ ಬಳಿ ಇರುವ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪುತ್ಥಳಿ ಬಳಿ ಸ್ಥಾಪಿಸಲು ಕಾಮಗಾರಿ ನಡೆದಿದ್ದು, ಆಗಸ್ಟ್ 15 ರಂದು ನೂತನ 75 ಅಡಿ ಎತ್ತರದ ಸ್ತಂಭದ ಮೇಲೆ ತ್ರಿವರ್ಣ ಧ್ವಜ ರಾರಾಜಿಸಲಿದೆ.
ಬೈಟ್.1 ಪ್ರಕಾಶ್ ಕೋಕಾಟೆ, ಪಟ್ಟಣ ಪಂಚಾಯಿತಿ ಅಧ್ಯಕ್ಷರು
ಈಗಾಗಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಆಡಳಿತ ಮಂಡಳಿ ಪೂರ್ವ ಸಿದ್ಧತಾ ಕಾರ್ಯಕ್ರಮದಲ್ಲಿ ತೊಡಗಿದ್ದು, ಈ ಸಾಧನೆ ಸಮಸ್ತ ಕುಂದಗೋಳ ಪಟ್ಟಣ ಹಾಗೂ ತಾಲೂಕಿನ ಜನರಿಗೆ ಸಂತೋಷ ತಂದಿದೆ.
ಬೈಟ್.2 ಪ್ರವೀಣ, ಮುದೆಣ್ಣನವರ
ಸದ್ಯ ಕೆರಯಂಗಳದ ಸಂಪೂರ್ಣ ಅಭಿವೃದ್ಧಿಗೆ ಪಣ ತೊಟ್ಟ ಪಟ್ಟಣ ಪಂಚಾಯಿತಿ ಕರೆ ಸುತ್ತ ಲೈಟಿಂಗ್, ಪೇವರ್ಸ್, ಉದ್ಯಾನವನ ಕಾಮಗಾರಿಗೆ ಯೋಜನೆ ಹಾಕಿದ್ದು, ಕೆರೆ ಮುಂದೆ 75 ಅಡಿ ಧ್ವಜ ಸ್ತಂಭ ಅನಾವರಣ ಮಾಡಿ ಪ್ರೇಕ್ಷಣೀಯ ಸ್ಥಳವಾಗಿಸಲು ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದಿವೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
11/08/2022 02:11 pm