ಅಳ್ನಾವರ: ಎಲ್ಲಿ ನೋಡಿದರೂ ಜನ ಸಾಗರ, ಭಾರತ್ ಮಾತಾಕಿ ಜೈ ಎಂಬ ಜೈಕಾರ. ಎಲ್ಲರ ಬಾಯಲ್ಲೂ ಒಂದೇ ಉದ್ಘೋಷ ಒಂದೇ ಮಾತರಂ, ಒಂದೇ ಮಾತರಂ. ನಿಜಕ್ಕೂ ಇದನ್ನು ಆನಂದಿಸಲು ಎರಡು ಕಣ್ಣು ಸಾಲದು ಎಂಬ ಭಾವನೆ.
ಹೌದು.. 19 ವರ್ಷಗಳ ಕಾಲ ಭಾರತೀಯ ಸೇನೆಯ ಸೇವೆ ಸಲ್ಲಿಸಿ ಮರಳಿ ತವರೂರಿಗೆ ಆಗಮಿಸಿದ ವೀರ ಯೋಧ ಶಿವಾಜಿ ಕುಣಕಿಕೊಪ್ಪ ಅವರಿಗೆ ಡೋರಿ ಗ್ರಾಮ ಹಾಗೂ ಅಳ್ನಾವರದ ಜನತೆ ಆತ್ಮೀಯವಾಗಿ ಬರಮಾಡಿಕೊಂಡ ರೀತಿಯದು.
ಮೂಲತಃ ಅಳ್ನಾವರ ತಾಲೂಕಿನ ಡೋರಿ ಗ್ರಾಮದವರಾದ ಶಿವಾಜಿ ಕುಣಕಿಕೊಪ್ಪ ಭಾರತೀಯ ಸೇನೆಯಲ್ಲಿ ಸುಮಾರು 19 ವರ್ಷಗಳ ಕಾಲ ವೀರ ಯೋಧನಾಗಿ ಸೇವೆ ಸಲ್ಲಿಸಿದ್ದಾರೆ. ಸೇನೆಯಲ್ಲಿ ವಿವಿಧ ಮೇಲ್ದರ್ಜೆ ಹುದ್ದೆಗಳನ್ನ ಅಲಂಕರಿಸಿ 19 ವರ್ಷಗಳ ನಂತರ ಸೇನೆಯಿಂದ ನಿವೃತ್ತಿ ಹೊಂದಿ ಇಂದು ಮರಳಿ ತನ್ನ ತವರೂರಿಗೆ ಆಗಮಿಸಿದ್ದಾರೆ.
ಡೋರಿ ಗ್ರಾಮದ ಜನತೆ ಶಿವಾಜಿ ಅವರನ್ನ ಅತ್ಯಂತ ಅದ್ಧೂರಿಯಿಂದ ಬರಮಾಡಿಕೊಂಡ ಗ್ರಾಮಸ್ಥರು ಮಾಲೆ ಹಾಕಿ, ಹೂ ಗುಚ್ಛ ನೀಡಿ ಕಾಲಿಗೆ ನೀರುಹಾಕಿ ಆರತಿ ಎತ್ತಿದರು. ಸುರಿಯೋ ಮಳೆಯ ನಡುವೆಯೂ ಗ್ರಾಮಸ್ಥರ ಉತ್ಸಾಹದಲ್ಲಿ ಕೊರತೆ ಕಾಣಲಿಲ್ಲ. ಈ ಸುಸಂದರ್ಭದಲ್ಲಿ ಮಾಜಿ ಸೈನಿಕ ಪ್ರಸಾದ ಕುಣಕಿಕೊಪ್ಪ, ಬೆನಚಿ ಗ್ರಾ.ಪಂ ಅಧ್ಯಕ್ಷ ಉಮೇಶ ಕದಂ ಹಾಗೂ ಡೋರಿ ಗ್ರಾಮಸ್ಥರು, ಅಳ್ನಾವರದ ಜನತೆ ಭಾಗಿಯಾಗಿದ್ದರು.
ಮಹಾಂತೇಶ ಪಠಾಣಿ
ಪಬ್ಲಿಕ್ ನೆಕ್ಸ್ಟ್ ಅಳ್ನಾವರ
Kshetra Samachara
03/08/2022 03:00 pm