ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಕನ್ನಡ ಅನುಷ್ಠಾನ ಅರ್ಧಕ್ಕರ್ಧ ಮಾತ್ರ: ನಾಗಾಭರಣ ಹೇಳಿಕೆ

ಧಾರವಾಡ: ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಯಬೇಕು ಎಂಬ ದೃಷ್ಠಿಯಿಂದ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕವನ್ನು ರಚನೆ ಮಾಡಲಾಗಿದೆ. ಇದನ್ನು ಅನುಷ್ಠಾನಕ್ಕೆ ತಂದಿದ್ದೇ ಆದಲ್ಲಿ ಕನ್ನಡಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬಹುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಹೇಳಿದರು.

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡದ ಚಳವಳಿಯನ್ನು ಹುಟ್ಟು ಹಾಕಿದ ಧಾರವಾಡ ಜಿಲ್ಲೆಯಲ್ಲೂ ಕನ್ನಡದ ಅನುಷ್ಠಾನ ಅರ್ಧಕ್ಕರ್ಧ ಆಗಿದೆ. ಇದಕ್ಕೆ ಅಧಿಕಾರಿಗಳ ಇಚ್ಛಾಶಕ್ತಿ ಹಾಗೂ ತಾತ್ಸಾರ ಭಾವನೆ ಕಾರಣ ಇರಬಹುದು. ಧಾರವಾಡವನ್ನು ಮಾದರಿ ಮಾಡುವ ಆಸೆ ನನಗಿದೆ. ಇಲ್ಲಿ ಕನ್ನಡದ ಅನುಷ್ಠಾನ ಅಚ್ಚುಕಟ್ಟಾಗಿ ಆಗಬೇಕಿದೆ ಎಂದರು.

ಕನ್ನಡ ಭಾಷೆ ಮೇಲಾಗುತ್ತಿರುವ ಅನ್ಯಾಯವನ್ನು ತಡೆಗಟ್ಟುವ ಉದ್ದೇಶಕ್ಕಾಗಿ ಕಾನೂನು ಆಯೋಗದ ಸಹಕಾರದೊಂದಿಗೆ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕವನ್ನು ರಚಿಸಿ, ಒಂದು ವಾರದ ಹಿಂದೆ ಕಾನೂನು ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಕೊಟ್ಟಿದ್ದೇವೆ. ಸಿಎಂ ಅವರಿಗೂ ಈ ವಿಧೇಯಕವನ್ನು ನೀಡಲಿದ್ದೇವೆ. ಸರೋಜಿನಿ ಮಹಿಷಿ ವರದಿಯಲ್ಲಿ ಅಂಶಗಳನ್ನೇ ಈ ವಿಧೇಯಕದಲ್ಲಿ ಅಳವಡಿಸಲಾಗಿದೆ ಎಂದರು.

ಎಲ್ಲಾ ವರದಿಗಳಿಗೂ ಕಾನೂನಿನ ಬಲ ಇಲ್ಲ. ವರದಿಗಳಿಗೆ ಬಲ ಬರಬೇಕಾದರೆ ಅವುಗಳು ಕಲಾಪದಲ್ಲಿ ಪಾಸಾಗಬೇಕು. ಧಾರವಾಡದಲ್ಲಿ ಮಾತ್ರ ಕನ್ನಡ ಅರ್ಧಕ್ಕರ್ಧ ಅನುಷ್ಠಾಗೊಂಡಿಲ್ಲ. ಬೆಂಗಳೂರಿನಲ್ಲೂ ಭಾಷೆಯ ಸಮಸ್ಯೆ ಇದೆ. ಬೆಂಗಳೂರಿನಲ್ಲೂ ಭಾಷೆ ಅರ್ಧಕ್ಕರ್ಧ ಅನುಷ್ಠಾನಗೊಂಡಿದೆ. ಕನ್ನಡದ ಜಾಲತಾಣಗಳ ಮುಖಪುಟ ಮಾತ್ರ ಕನ್ನಡದಲ್ಲಿವೆ. ಕೇಂದ್ರೀಯ ವಿದ್ಯಾಲಯದ ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಕನ್ನಡ ಇಲ್ಲ. ಅವು ತಮ್ಮದೇ ಆದಂತ ತೀರ್ಮಾನಗಳನ್ನು ತೆಗೆದುಕೊಂಡಿವೆ. ಐಚ್ಛಿಕ ವಿಷಯವಾಗಿ ಕನ್ನಡವನ್ನು ತೆಗೆದುಕೊಂಡಿವೆ. ಈ ನೆಲದ ಕಾನೂನನ್ನು ಯಾರೂ ಪಾಲಿಸುತ್ತಿಲ್ಲ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಒಂದು ನೀತಿ. ಅದನ್ನು ಹೇಗೆ ಜಾರಿ ಮಾಡಬೇಕು ಎಂಬುದು ಆಯಾ ಸರ್ಕಾರಗಳಿಗೆ ಬಿಟ್ಟದ್ದು. ನಮ್ಮ ಪ್ರಾಧಿಕಾರಕ್ಕೆ ಸರ್ಕಾರ ಒಂದು ಅರ್ಥದಲ್ಲಿ ಒಳ್ಳೆಯ ರೀತಿಯ ಸಹಕಾರ ಕೊಡುತ್ತಿದೆ. ಇನ್ನೊಂದು ಅರ್ಥದಲ್ಲಿ ಸರ್ಕಾರದ ಸಹಕಾರ ಅಷ್ಟಕ್ಕಷ್ಟೇ ಎಂದು ನಾಗಾಭರಣ ಅಸಮಾಧಾನ ವ್ಯಕ್ತಪಡಿಸಿದರು.

ಪೋಷಕರಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚಾಗಿದೆ. ಈ ವ್ಯಾಮೋಹ ಕಾನೂನಿನ ಮೂಲಕ ಪರಿಹಾರವಾಗುವುದಿಲ್ಲ. ನಮ್ಮ ಪ್ರಾಧಿಕಾರದ ಕೆಲಸವೇ ಕಡಿಮೆ ಇದೆ. ಗಡಿ ಭಾಗದ ಸರ್ಕಾರಿ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಒಂದು ವರದಿಯನ್ನೂ ಕೊಟ್ಟಿದ್ದೇನೆ ಎಂದರು. ಒಂದು ವೇಳೆ ಸಮಗ್ರ ಕನ್ನಡ ಅಭಿವೃದ್ಧಿ ವಿಧೇಯಕ ಸದನದಲ್ಲಿ ಪಾಸಾಗದೇ ಇದ್ದರೆ ನಾನು ರಾಜೀನಾಮೆ ಕೊಡಬಹುದು. ನಾನು ರಾಜೀನಾಮೆ ಕೊಟ್ಟ ಮಾತ್ರಕ್ಕೆ ವಿಧೇಯಕ ಪಾಸಾಗುವುದಿಲ್ಲ ಎಂದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/07/2022 04:35 pm

Cinque Terre

74.22 K

Cinque Terre

1

ಸಂಬಂಧಿತ ಸುದ್ದಿ