ಹುಬ್ಬಳ್ಳಿ: ಅವಳಿ ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಸ್ಮಾರ್ಟ್ ಲುಕ್ ನೀಡಿದೆ. ಹಾಳು ಕೊಂಪೆಯಾಗಿದ್ದ ಇಂದಿರಾಗಾಂಧಿ ಗಾಜಿನ ಮನೆ ಈಗ ಅರಮನೆಯಂತೆ ಝಗಮಗಿಸುತ್ತಿದೆ. ಆದರೆ ಇಲ್ಲೊಂದು ಕಾರ್ಯಕ್ರಮ ವೈಭವವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.
ಹಾಳುಕೊಂಪೆಯಂತಾಗಿದ್ದ ಇಂದಿರಾಗಾಂಧಿ ಗಾಜಿನ ಮನೆಯಲ್ಲಿ ಕಾರಂಜಿಗಳ ಕಲರವದಿಂದ ಮತ್ತಷ್ಟು ಮೆರಗು ಹೆಚ್ಚಿದ್ದು, ಹುಬ್ಬಳ್ಳಿಯ ಜನರ ಖುಷಿಯನ್ನ ಹೆಚ್ಚಿಸಿದೆ. ಅಲ್ಲದೇ ವೀಕೆಂಡ್ ಹಾಗೂ ಹಾಲಿಡೇಸ್ ಜಾಲಿಯನ್ನು ಸವಿಯಲು ಹುಬ್ಬಳ್ಳಿಯಲ್ಲಿ ಮ್ಯೂಸಿಕ್ ಫೌಂಟೇನ್ ಆರಂಭವಾಗಿದೆ. ಅಲ್ಲದೇ ಇಲ್ಲಿಯ ಖುಷಿಯನ್ನ ಹಂಚಿಕೊಂಡ ಜನ ಏನಂತಾರೇ ನೀವೆ ಕೇಳಿ...
ಇನ್ನು ಹುಬ್ಬಳ್ಳಿ ಧಾರವಾಡ ಮಹಾನಗರದ ಮಹತ್ವದ ಯೋಜನೆಯಲ್ಲಿ ಒಂದಾಗಿರುವ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಪ್ರೇಕ್ಷಣೀಯ ಸ್ಥಳವನ್ನಾಗಿ ಇಂದಿರಾ ಗಾಂಧಿ ಗಾಜಿನ ಮನೆಯನ್ನು ಮಾರ್ಪಾಡು ಮಾಡಿದ್ದು, ನಿಜಕ್ಕೂ ಒಂದು ಅದ್ಭುತದ ಕೆಲಸವೇ ಸರಿ. ಇಂತಹ ಪ್ರವಾಸಿ ತಾಣಕ್ಕೆ ಈಗಾಗಲೇ ವಿದ್ಯುಕ್ತವಾಗಿ ಚಾಲನೆ ನೀಡಿದ್ದು, ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ನಿಜಕ್ಕೂ ವಿಶೇಷವಾಗಿದೆ.
ಒಟ್ಟಿನಲ್ಲಿ ಇಂದಿರಾ ಗಾಂಧಿ ಗಾಜಿನ ಮನೆಯ ವೈಭವವನ್ನು ಹೆಚ್ಚಿಸುವಂತೆ ಮಾಡಿರುವ ಮ್ಯೂಸಿಕ್ ಫೌಂಟೇನ್ ನಿಜಕ್ಕೂ ನೋಡುಗರನ್ನು ಬೆರಗಾಗುವಂತೆ ಮಾಡಿದ್ದು, ಪ್ರವಾಸಿಗರನ್ನು ತನ್ನತ್ತ ಕೈ ಮಾಡಿ ಕರೆಯುತ್ತಿದೆ.
-ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
13/05/2022 12:47 pm