ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಏಪ್ರಿಲ್ 15 ಮತ್ತು 16ರಂದು ಶರಣೋತ್ಸವ ಕಾರ್ಯಕ್ರಮ

ಹುಬ್ಬಳ್ಳಿ: ರಾಷ್ಟ್ರೀಯ ಬಸವದಳ ಮತ್ತು ಧಾರವಾಡದ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧೀಶರಾದ ಶ್ರೀ ಜಗದ್ಗುರು ಮಾತೆ ಜ್ಞಾನೇಶ್ವರಿಯವರ ನೇತೃತ್ವದಲ್ಲಿ ಏ.15 & 16 ರಂದು ಶರಣೋತ್ಸವ ಕಾರ್ಯಕ್ರಮವನ್ನು ಧಾರವಾಡದ ಉಳವಿ ರಸ್ತೆಯ ಅಕ್ಕಮಹಾದೇವಿ ಅನುಭಾವಪೀಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಲ್ಲಮಗಿರಿಯ ಬಸವಕುಮಾರ ಸ್ವಾಮಿಗಳು ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, 2010 ರಿಂದ ನಿರಂತರವಾಗಿ ಶರಣೋತ್ಸವ ಕಾರ್ಯಕ್ರಮ ಜರಗುತ್ತಿದ್ದು, ಅಂದು ಅಕ್ಕಮಹಾದೇವಿ ಪೀಠದ ಪೀಠಾರೋಹಣ, ಸಾಮೂಹಿಕ ಪ್ರಾರ್ಥನೆ, ಪ್ರವಚನ, ವಚನ ಗಾಯನ, ವಚನ ನೃತ್ಯ ಮುಂತಾದ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲಾ ಶರಣ, ಶರಣೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಅಂದಿನ ಕಾರ್ಯಕ್ರಮಕ್ಕೆ ಶರಣೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಅರವಿಂದ್ ಬೆಲ್ಲದ, ಕೂಡಲಸಂಗಮ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿ, ಧಾರವಾಡದ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧ್ಯಕ್ಷೆ ಶ್ರೀ ಜಗದ್ಗುರು ಮಾತೆ ಜ್ಞಾನೇಶ್ವರಿ, ಕುಂಬಳಗೋಡ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರು ಹಾಗೂ ಶರಣೋತ್ಸವ ಸಮಿತಿಯ ಪ್ರಧಾನ ಸಂಘಟಕರಾದ ಚನ್ನಬಸವ ಚನ್ನಬಸವಾನಂದ ಸ್ವಾಮೀಜಿ, ಕಲಬುರ್ಗಿ ಬಸವ ಮಂಟಪದ ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿ, ಬೀದರನ ಬಸವ ಮಂಟಪದ ಸದ್ಗುರು ಮಾತೆ ಸತ್ಯಾದೇವಿ, ಬೆಳಗಾವಿ ಗುರು ಮಂಟಪದ ಸದ್ಗುರು ಶ್ರೀ ಬಸವಪ್ರಕಾಶ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದರು.

Edited By : Shivu K
Kshetra Samachara

Kshetra Samachara

09/04/2022 02:16 pm

Cinque Terre

13.64 K

Cinque Terre

0

ಸಂಬಂಧಿತ ಸುದ್ದಿ