ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಕ್ಕಿಬೇಳೆ ಪೂಜೆ ನಿಮಿತ್ತ ಜಾನಪದ ಝೇಂಕಾರ ಜಾತ್ರೆ

ಕುಂದಗೋಳ : ತಾಲೂಕಿನ ಶಿರೂರು ಗ್ರಾಮದಲ್ಲಿ ಐತಿಹಾಸಿಕ ಅಕ್ಕಿ ಬೇಳೆ ಪೂಜೆ ಕಾರ್ಯಕ್ರಮದ ನಿಮಿತ್ತ ಸುಪ್ರಸಿದ್ಧ ಜಾನಪದ ಗಾಯಕ ಗುರುರಾಜ ಹೊಸಕೋಟೆ ಮತ್ತು ತಂಡದಿಂದ ನಡೆದ ಜಾನಪದ ಜಾತ್ರೆ ನಡೆಯಿತು.

ಸರಿಸುಮಾರು 300 ವರ್ಷಗಳ ಇತಿಹಾಸದ ಅಕ್ಕಿ ಬೇಳೆ ಪೂಜೆಯ ಸಲುವಾಗಿ ನಿನ್ನೆ ಗ್ರಾಮದ ಮುಖಂಡರು ಶಿರೂರು ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗುರುರಾಜ ಹೊಸಕೋಟೆ ಅವರಿಂದ ಜಾನಪದ ಹಾಡು, ಜಾನಪದ ಹಾಸ್ಯ ಚಟಾಕಿಗಳಿಗೆ ವೇದಿಕೆ ಕಲ್ಪಿಸಿ, ಜಾನಪದ ಕಲೆ ಉಳಿವಿನ ಜೊತೆಗೆ ರೈತಾಪಿ ಜನರಿಗೆ ಮನೋರಂಜನೆಯನ್ನು ಒದಗಿಸಿದರು. ಈ ವೇಳೆ ಕುಂದಗೋಳ ತಾಲೂಕು ಸೇರಿದಂತೆ ವಿವಿಧೆಡೆಯಿಂದ ಜನರು ಆಗಮಿಸಿ ಜಾನಪದ ಝೇಂಕಾರ ಕಾರ್ಯಕ್ರಮ ವೀಕ್ಷಿಸಿದ್ರು.

Edited By : Manjunath H D
Kshetra Samachara

Kshetra Samachara

17/03/2022 03:17 pm

Cinque Terre

11.2 K

Cinque Terre

0

ಸಂಬಂಧಿತ ಸುದ್ದಿ