ನವಲಗುಂದ : ಪಂಡಿತ ದೀನದಯಾಳ ಉಪಾಧ್ಯಾಯರ ಪುಣ್ಯತಿಥಿಯ ನಿಮಿತ್ತ ನವಲಗುಂದ ನಗರದ ಭೂತ್ ಅಧ್ಯಕ್ಷರಾದ ಸಿದ್ದಪ್ಪ ಮಲ್ಲಪ್ಪ ಜನ್ನರ ಅವರ ಮನೆಯಲ್ಲಿ ಬೂತ್ ನಂಬರ್ 102 ರಲ್ಲಿ ದೀನ್ ದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಕುಂದಗೋಳಮಠ, ಮಂಡಲ ಅಧ್ಯಕ್ಷರಾದ ಶರಣ್ಣಪ್ಪಗೌಡ ದಾನಪ್ಪಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಗುಂಡಗೋವಿ, ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ಮಹೇಶ ತೊಗಲಂಗಿ, ನಗರ ಘಟಕದ ಅಧ್ಯಕ್ಷರಾದ ಅಣ್ಣಪ್ಪ ಬಾಗಿ, ಜನ ಸಂಘದ ಹಿರಿಯರಾದ ಎನ್.ಪಿ ಕುಲಕರ್ಣಿ, ಪ್ರಶಿಕ್ಷಣ ಪ್ರಕೋಷ್ಠ ತಾಲೂಕ ಸಂಚಾಲಕರಾದ ಐ.ಡಿ.ಪ್ರಭುಗೌಡ, ನಗರ ಘಟಕ ಪ್ರಧಾನ ಕಾರ್ಯದರ್ಶಿ ಬಸವರಾಜ ಕಾತರಕಿ, ಮಂಡಲ ಸಿದ್ದು ಪೂಜಾರ ಉಪಸ್ಥಿತರಿದ್ದರು.
Kshetra Samachara
12/02/2022 08:33 am