ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗೌಳಿ ಸಮುದಾಯದ ಸಂಪ್ರದಾಯಿಕ ಆಚರಣೆ: ಶಿಲ್ಲಂಗಾನ ಸಂಭ್ರಮದಲ್ಲಿ ಗೌಳಿ ಜನರು...!

ಹುಬ್ಬಳ್ಳಿ: ಅವರೆಲ್ಲ ಕಾಡಂಚಿನಲ್ಲಿಯೇ ಬದುಕನ್ನು ಕಟ್ಟಿಕೊಂಡವರು. ದನಗಳನ್ನು ಕಾಯುವ ಮೂಲಕ ಜೀವನ ನಡೆಸುತ್ತಿರುವ ಬಡಜನರು. ಈ ಜನರ ಒಂದು ಅದ್ಬುತ ಆಚರಣೆಯನ್ನು ನೋಡಿದರೇ ನಿಜಕ್ಕೂ ವಿಭಿನ್ನ ಎನ್ನಿಸುವುದಂತೂ ಸತ್ಯ..

ಮುಂಡಗೋಡ ತಾಲೂಕಿನ ಧನಗರ ಗೌಳಿ ಜನಾಂಗದವರು ನವರಾತ್ರಿ ಉತ್ಸವವನ್ನು ಬಹಳ ವಿಶೇಷ ರೀತಿಯಲ್ಲಿ ಅದ್ದೂರಿಯಾಗಿ ಆಚರಿಸುತ್ತಾ ಬರುತ್ತಿರುವುದು ಗಮನ ಸೆಳೆಯುತ್ತದೆ. ತಾಲೂಕಿನ ಮೈನಳ್ಳಿ ಬಡ್ಡಿಗೇರಿ, ಚಳಗೇರಿ, ಕಳೆಬಾರೆ, ಕುದುರೆಗಳ ಮತ್ತು ಬ್ಯಾನಳ್ಳಿ ಸೇರಿದಂತೆ ಒಟ್ಟು 32 ಹಳ್ಳಿಗಳಲ್ಲಿ ವಾಸವಾಗಿರುವ ಧನಗರ ಗೌಳಿ ಜನಾಂಗವ ಮೂಲತಃ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದವರು. ಇವರ ಮೂಲ ಕಸುಬು ಹೈನುಗಾರಿಕೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಜನಾಂಗದ ಮೂಲ ಕಸುಬು ಹೈನುಗಾರಿಕೆ ನಡೆಸುತ್ತಾ ಬಂದಿದೆ. ಇದಕ್ಕೆ ಮುಖ್ಯ ಕಾರಣ ಹಲವಾರು, ಕೆಲ ಅರಣ್ಯ ಸಿಬ್ಬಂದಿ ಅರಣ್ಯದಲ್ಲಿ ಹಸು ಹಾಗೂ ಎಮ್ಮೆಗಳನ್ನು ಮೇಯಿಸಲು ಬಿಡದಿರುವುದು, ನೋವು ಹಾಗೂ ನೀರಿನ ಕೊರತೆ ಇತ್ಯಾದಿ, ಈ ಹಿಂದೆ ನೂರಾರು ಎಮ್ಮೆ ಹಾಗೂ ಹಸುಗಳನ್ನು ಸಾಕುತ್ತಿದ್ದರು, ಆದರೆ ಈಗ ಇವು ಸಂಖ್ಯೆ ಕ್ಷೀಣಿಸುತ್ತಾ ಬಂದಿದೆ.

ದಸರಾ ಮುಗಿದ ಕೆಲವು ದಿನದ ಬಳಿಕ ಆಚರಿಸುವ ವಿಶೇಷ ಹಬ್ಬವೇ ಶಿಲ್ಲಂಗಾನ ಇದರ ವಿಶೇಷತೆ ಎಂದರೆ ನಮ್ಮ ಊರಿಗೆ ಒಳ್ಳೆಯದಾಗಲಿ. ದನಕರುಗಳಿಗೆ ರೋಗ ಬರದಂತಿರಲಿ ಎಂದು ಹರಕೆ ತೀರಿಸುವುದು, ಇದನ್ನು ಒಂದು ಊರಿನಲ್ಲಿ ಹಮ್ಮಿಕೊಂಡು ಅಕ್ಕ ಪಕ್ಕದ ಊರುಗಳಿಗೆ ತಾಂಬೂಲ ಕೊಟ್ಟು ಜನರನ್ನು ಆಮಂತ್ರಿಸಲಾಗುತ್ತದೆ. ಆಮಂತ್ರಣ ಕರಿ ನೂರಾರು ಜನ ಬೇರೆ ಬೇರೆ ಊರುಗಳಿಂದ ಬಂದಿರುತ್ತಾರೆ.

ಮಹಿಳೆಯರು ಮಡಕೆಯಲ್ಲಿ ಮಜ್ಜಿಗೆ ಮತ್ತು ಅದರ ಮೇಲೊಂದು ತೆಂಗಿನಕಾಯಿ ಇಟ್ಟುಕೊಂಡು ಮತ್ತು ಪುರುಷರು ವಾದ್ಯಗಳ ಮೂಲಕ ಶ್ವೇತ ವರ್ಣದ ಸಮವಸ್ತ್ರ ಧರಿಸಿಕೊಂಡು ವಿಶೇಷ ರೀತಿಯಲ್ಲಿ ಇಂತಹದೊಂದು ಆಚರಣೆ ಆಚರಿಸುತ್ತಾರೆ.

-ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

26/10/2021 01:06 pm

Cinque Terre

20.34 K

Cinque Terre

2

ಸಂಬಂಧಿತ ಸುದ್ದಿ