ಕುಂದಗೋಳ: ಸಮೀಪದ ಗುಡೇನಕಟ್ಟಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಕ್ರಪ್ಪ ಕಮ್ಮಾರ ಮಾತನಾಡಿ, 'ಸರ್ಕಾರದ ಕೊಡುಗೆ ದೇಶಕ್ಕೆ ಅಪಾರ ಅವರು ರೈತರಿಗೆ ಪ್ರತಿನಿತ್ಯ ಉಪಯೋಗಿಸುವ ಕೃಷಿ ಚಟುವಟಿಕೆಗಳಿಗೆ ಹಾಗೂ ಮೂರ್ತಿಗಳನ್ನು ಕೆತ್ತನೆ ಮಾಡುವಲ್ಲಿ ಅವರು ಅಪಾರ ಹೆಸರು ಬಳಸಿಕೊಂಡಿದ್ದಾರೆ. ಅವರ ಕೊಡುಗೆ ವಿಶ್ವಕ್ಕೆ ಅಪಾರ' ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾನಪ್ಪಕುಮಾರ ಪಾಂಡುರಂಗ ಬಡಿಗೇರ, ಮಾನಪ್ಪ ಬಡಿಗೇರ, ಈರಪ್ಪ ಅರ್ಕಸಾಲಿ ಈರಪ್ಪ ಬಡಿಗೇರ, ಗುರುನಾಥ ಕಮ್ಮಾರ, ಉಮೇಶ್ ಕಮ್ಮಾರ, ವಿರುಪಾಕ್ಷ ಬಡಿಗೇರ ಹಾಗೂ ಗ್ರಾಮದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Kshetra Samachara
17/09/2021 10:14 pm