ಕಲಘಟಗಿ : ತಾಲ್ಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಹಿರಿಯ ಆರೋಗ್ಯ ಕೇಂದ್ರದ ಸಹಾಯಕಿ ಎಸ್.ಪಿ ಕಟ್ಟಿ ಅವರ ಸೇವಾ ನಿವೃತ್ತಿ ಹೊಂದಿದಕ್ಕೆ ಗ್ರಾಮ ಪಂಚಾಯತಿ ಹಾಗೂ ಗ್ರಾಮಸ್ಥರಿಂದ ಬೀಳ್ಕೊಡು ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯಲ್ಲಪ್ಪ ದಾಸನಕೊಪ್ಪ ಮಾತನಾಡಿ ಅಧಿಕಾರ ಹಣ ಯಾವುದು ಶಾಶ್ವತವಲ್ಲ ಕಟ್ಟಿ ಅವರ ಕಾರ್ಯಕ್ಷಮತೆ ಗ್ರಾಮದ ಸುತ್ತಮುತ್ತಲಿನ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸಹದೇವಪ್ಪ ಧನಿಗೊಂಡ, ಶಿವಲಿಂಗಪ್ಪ ಯಲಿವಾಳ, ವಿನಾಯಕ ದನಿಗೊಂಡ, ಶಂಕರಲಿಂಗ ಕೆಲಗೇರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಯಲ್ಲವ್ವ ಮಡ್ಲಿ, ಉಪಾಧ್ಯಕ್ಷ ಶಿವಾಜಿ ದಂಡಿನ, ನಿಂಗಪ್ಪ ಬೆಳ್ಳಿ ವಾಲಿ, ಚನ್ನಪ್ಪ ಕೆಲಗೇರಿ,ಈರವ್ವ ದಾಸನಕೊಪ್ಪ ದ್ಯಾಮಣ್ಣ ಬಡಿಗೇರ, ಚನ್ನಬಸಪ್ಪ ತಳವಾರ, ಶಂಕ್ರಪ್ಪ ಮನಗುಂಡಿ, ಷಣ್ಮುಖಪ್ಪ ಬಡಿಗೇರ ಹಾಗೂ ಗ್ರಾಮ ಪಂಚಾಯತಿ ಹಾಲಿ ಮತ್ತು ಮಾಜಿ ಸದಸ್ಯರು,ಹಾಲು ಉತ್ಪಾದಕರ ಸಂಘದ ಸದಸ್ಯರು,ವಿ ಎಸ್ ಎಸ್ ಬ್ಯಾಂಕ್ ಪದಾಧಿಕಾರಿಗಳು,ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಗ್ರಾಮಸ್ಥರು ಇದ್ದರು.
Kshetra Samachara
11/09/2021 01:17 pm