ಕುಂದಗೋಳ : ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಭಾವಚಿತ್ರವನ್ನು ಸರ್ಕಾರಿ ಮಟ್ಟದ ಪ್ರತಿಯೊಂದು ಇಲಾಖೆಯಲ್ಲಿ ಗೌರವಿಸಬೇಕು ಹಾಗೂ ಅವರ ಭಾವಚಿತ್ರಕ್ಕೆ ಗೌರವ ನೀಡಬೇಕೆಂದು ಕುಂದಗೋಳ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದವರು ಕಲ್ಯಾಣಪುರ ಬಸವಣ್ಣನವರ ನೇತೃತ್ವದಲ್ಲಿ ಕುಂದಗೋಳ ಪಟ್ಟಣದ ಎಲ್ಲ ಸರ್ಕಾರಿ ಕಚೇರಿಗಳಿಗೆ ಸಂಗೋಳ್ಳಿ ರಾಯಣ್ಣನ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದರು.
ಕುಂದಗೋಳದ ಪಟ್ಟಣ ಪಂಚಾಯಿತಿ, ತಹಶೀಲ್ದಾರ ಕಚೇರಿ, ಸರ್ಕಾರಿ ಆಸ್ಪತ್ರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸೇರಿದಂತೆ ಪ್ರತಿಯೊಂದು ಇಲಾಖೆಗೂ ಸಂಗೋಳ್ಳಿ ರಾಯಣ್ಣನ ಭಾವಚಿತ್ರ ನೀಡಿದರು.
ಪಟ್ಟಣದ ಕುರಬಗೇರಿಯ ಕರಿಸಿದ್ಧೇಶ್ವರ ದೇವಸ್ಥಾನದಲ್ಲಿ ಅಭಿನವ ಕಲ್ಯಾಣಪುರ ಬಸವಣ್ಣನವರು ಭಾವ ಚಿತ್ರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಸಮಾಜ ಸೇವಕ ಯಲ್ಲಪ್ಪ ದಬಗೊಂದಿ ಭಾವಚಿತ್ರಗಳನ್ನು ವಿತರಿಸಿದರು ಈ ಸಂದರ್ಭದಲ್ಲಿ ಗುರು ಹಿರಿಯರು ಯುವಕರು ಉಪಸ್ಥಿತರಿದ್ದರು.
Kshetra Samachara
08/09/2021 01:40 pm