ಹುಬ್ಬಳ್ಳಿ: ನಾಡಿನ ಮಹಾತ್ಮರ ಚರಿತೆಯನ್ನು ನಾಡಿನ ಜನತೆಗೆ ಉಣಬಡಿಸುವ ಸದುದ್ದೇಶದಿಂದ ಪ್ರಭುಚನ್ನಬಸವ ಸ್ವಾಮೀಜಿಯವರ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಇದೇ 25ರಂದು ಬೆಂಗಳೂರಿನ ವಿಜಯ ನಗರದ ಬಸವೇಶ್ವರ ಸುಜ್ಞಾನ ಮಂಟಪದ ವೇದಿಕೆಯಲ್ಲಿ ಆಯೋಜಿಸಲಾಗಿದೆ ಎಂದು ಪ್ರಭುಚನ್ನಬಸವ ಸ್ವಾಮೀಜಿಯವರು ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮ ನಾಡಿನಲ್ಲಿ ಸಾಕಷ್ಟು ದಾರ್ಶನಿಕರು ಮಹಾತ್ಮರ ಜನ್ಮ ತಾಳಿ ಹಲವಾರು ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೇ ಅವರ ಜೀವನ ಶೈಲಿಯು ಮುಂದಿನ ಪೀಳಿಗೆಗೆ ದಾರದೀಪವಾಗಲಿ ಎಂಬುವಂತ ಆಶಯದಿಂದ ನಾಡಿನ ತುಂಬಾ ಸಂಚಾರ ಮಾಡಿ ಅಧ್ಯಯನದ ಮೂಲಕ ಮಹಾತ್ಮರ ಚರಿತ್ರೆಯನ್ನು ನಾಡಿನ ಜನತೆಗೆ ತಲುಪಿಸುವ ಪ್ರಯತ್ನವೊಂದನ್ನು ಮಾಡಿದ್ದೇವೆ ಎಂದರು.
ಅಂದು ನಡೆಯುವ ಕಾರ್ಯಕ್ರಮದಲ್ಲಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡಲಿದ್ದು, ಕಾರ್ಯಕ್ರಮ ಉದ್ಘಾಟನೆಯನ್ನು ನ್ಯಾ. ಶಿವರಾಜ ಪಾಟೀಲ ನೆರವೇರಿಸಲಿದ್ದು, ಹರ ಗುರು ಚರಮೂರ್ತಿಯವರ ಸನ್ನಿದಾನದಲ್ಲಿ ಹಾಗೂ ಹಲವಾರು ಮಠಾಧೀಶರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಅವರು ಹೇಳಿದರು.
Kshetra Samachara
07/09/2021 03:55 pm