ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಛತ್ರಪತಿ ಶಿವಾಜಿ ಮಹಾರಾಜರ ದೇಶಪ್ರೇಮವನ್ನು ಯುವಕರು ರೂಢಿಸಿಕೊಳ್ಳಬೇಕು : ಡಂಗನವರ

ಹುಬ್ಬಳ್ಳಿ : ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ನಿಮಿತ್ಯ, ನಗರದ ವಿದ್ಯಾನಗರ ಮರಾಠ ಭವನದ ಎದುರುಗಡೆ ಇರುವ, ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ವಿ. ಡಂಗನವರ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ತತ್ವ-ಸಿದ್ಧಾಂತ ದೇಶಪ್ರೇಮದಲ್ಲಿ ಇಂದಿನ ಯುವಕರು ತಮ್ಮ ಜೀವನದಲ್ಲಿ ಸಮಾಜದ ಅಳವಡಿಸಿಕೊಳ್ಳಲು ಕರೆ ನೀಡಿದರು. ನಂತರ ಮುಖಂಡರಾದ ರಾಜಣ್ಣ ಪವಾರ್ ಅವರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮರಾಠಾ ಸಮಾಜದ ಅಧ್ಯಕ್ಷ ಅರುಣ್ ಜಾಧವ, ಕಾರ್ಯದರ್ಶಿ ಡಿ.ಡಿ ವರಂಗ, ಮುಖಂಡರಾದ ತುಷಾರ್ ಕೊಳೇಕರ, ಶಾಮರಾವ ಸಿಂದೆ, ಬಸವ ಪರಿಸರ ಸಮಿತಿಯ ಸುರೇಶ ಹೊರಕೇರಿ, ಡಾ. ಬಸವಕುಮಾರ ತಲವಾಯಿ, ಶಂಕರಲಿಂಗ ಮಲಕಣ್ಣವರ, ಶಿವನಗೌಡ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

19/02/2021 09:23 pm

Cinque Terre

9.23 K

Cinque Terre

1

ಸಂಬಂಧಿತ ಸುದ್ದಿ