ಹಾವೇರಿ: ಚಳಿ,ಗಾಳಿ,ಬಿಸಿಲು ಎನ್ನದೇ ದುಡಿಯುವ ರೈತನ ಪ್ರೀತಿಯ ಎತ್ತುಗಳಿಗೆ ಮನರಂಜನೆ ನೀಡಲು ಈಗ ರೈತ ಸಮುದಾಯ ಮುಂದಾಗಿದೆ.ನಿಸ್ವಾರ್ಥ ಸೇವೆ ಸಲ್ಲಿಸುವ ಎತ್ತುಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿ ಎತ್ತುಗಳೊಂದಿಗೆ ಬೆರೆತು ಬೇಸರ ಕಳೆದುಕೊಳ್ಳಲು ರೈತರು ಹಲವಾರು ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಯಲವಿಗಿ ಗ್ರಾಮದಲ್ಲಿ ರಾಜ್ಯಮಟ್ಟದ ಬಾರಿ ಗಾಡಾ ಓಡಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಎತ್ತುಗಳಿಗೆ ಮನರಂಜನೆ ಪೂರಕವಾದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಒಂದು ನಿಮಿಷಗಳಲ್ಲಿ ಎತ್ತುಗಳು ಕ್ರಮಿಸುವ ದೂರದ ಮೇಲೆ ಬಹುಮಾನ ನಿಗದಿ ಮಾಡಲಾಗಿತ್ತು.ಇನ್ನೂ ರಭಸದಿಂದ ಓಡಿ ಬರುವ ಎತ್ತುಗಳನ್ನು ನೋಡುತ್ತಲೇ ರೈತರು ಸಂತಸವನ್ನು ವ್ಯಕ್ತಪಡಿಸಿದ್ದಂತೂ ಸತ್ಯ..
ವರ್ಷವೀಡಿ ಹೊಲದಲ್ಲಿ ಉಳಿಮೆ ಮಾಡಿ ದೇಶಕ್ಕೆ ಅನ್ನಹಾಕುವ ರೈತ ತನ್ನ ಜೀವನದಲ್ಲಿ ಮಾತ್ರವಲ್ಲದೆ ತನ್ನ ಸಹಪಾಠಿ ಎತ್ತುಗಳೊಂದಿಗೆ ಮನರಂಜನೆಗೆ ಮುಂದಾಗಿರುವುದು ವಿಶೇಷವಾಗಿದೆ.ಇನ್ನೂ ಈ ಸ್ಪರ್ಧೆಗೆ ಧಾರವಾಡ, ಹಾವೇರಿ,ಗದಗ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ರೈತರು ತಮ್ಮ ಎತ್ತುಗಳನ್ನು ತೆಗೆದುಕೊಂಡು ಬಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
Kshetra Samachara
15/02/2021 04:57 pm