ಕುಂದಗೋಳ : ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಕುಂದಗೋಳ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಸ್ವಚ್ಛತಾ ದಿನದ ಅಂಗವಾಗಿ ಸ್ವಚ್ಛತಾ ಜಾಗೃತಿ ಜಾಥಾ ಹಾಗೂ ಕುಂದಗೋಳ ಗ್ರಾಮೀಣ ಬಸ್ ನಿಲ್ದಾಣದ ಸ್ವಚ್ಛತಾ ಕಾರ್ಯ ಇಂದು ನೆರವೇರಿತು.
ಸ್ವಚ್ಛ ಭಾರತ ಶ್ರೇಷ್ಠ ಭಾರತ, ಕಸವನ್ನು ಬೀದಿಗೆ ಚೆಲ್ಲದಿರಿ, ನೈರ್ಮಲ್ಯ ಕಾಪಾಡಿ ಇದು ನಮ್ಮೆಲ್ಲರ, ಕರ್ತವ್ಯ ಎಂದು ಘೋಷಣೆ ಕೂಗುತ್ತ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರ ನೇತೃತ್ವದಲ್ಲಿ ಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿತು.
ಈ ಸ್ವಚ್ಛತಾ ಕಾರ್ಯಕ್ಕೆ ತಾಲೂಕು ಕಾನೂನು ಸೇವಾ ಸಮಿತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ವಾಗೀಶ ಗಂಗಾಯಿ, ಉಪಾಧ್ಯಕ್ಷೆ ಭುವನೇಶ್ವರಿ ಕವಲಗೇರಿ ಹಾಗೂ ಬಸ್ ನಿಲ್ದಾಣದ ಸಾರಿಗೆ ನಿರ್ವಾಹಕರು ಎಲ್ಲ ವಾರ್ಡ್ ಸದಸ್ಯರ ಜೊತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರೋಗ್ಯ ನಿರೀಕ್ಷಕರು ಪೊರಕೆ ಹಿಡಿದು ಕಸ ಗೂಡಿಸಿ ವಿಶ್ವ ಸ್ವಚ್ಛತಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
Kshetra Samachara
30/01/2021 03:57 pm