ಕುಂದಗೋಳ : ಪಟ್ಟಣದ ಜೆ.ಎಸ್.ಎಸ್.ವಿದ್ಯಾಪೀಠದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣದ ಮೂಲಕ ಗಣರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಪ.ಪೂ.ಶ್ರೀ ಮಹಾಂತ ಮಹಾಸ್ವಾಮಿಗಳು ಶಿವಾನಂದ ಮಠ ಪೂಜ್ಯರು ಧ್ವಜಾರೋಹಣ ನೇರವೆರಿಸಿ ವಿದ್ಯಾರ್ಥಿಗಳಿಗೆ ಆಶಿರ್ವಚನ ನೀಡಿ ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರಾಮಣ್ಣಾ ಹುಲಸೋಗಿ, ಪ್ರದೀಪ ಶೆಟ್ಟರ, ರಮೇಶ ಯಾದವಾಡ, ಸಂಸ್ಥೆ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜೆ.ಎಸ್ ಕೋಟಿಯವರು ನಿರೂಪಿಸಿದರು. ಕುಮಾರಿ ಮಂಜುಳಾ ಯಳವತ್ತಿ ಸ್ವಾಗತಿಸಿದರು. ಹಾಗೂ ಪಿ.ಜೆ. ಶಿಂಧೆ ಗುರುಮಾತೆಯರು ವಂದಿಸಿದರು.
Kshetra Samachara
26/01/2021 04:33 pm