ಕುಂದಗೋಳ : ನೆಹರು ಯುವ ಕೇಂದ್ರ ಧಾರವಾಡ ಹಾಗೂ ಸ್ವಾಮಿ ವಿವೇಕಾನಂದರ ಗೆಳೆಯರ ಬಳಗ ಚಾಕಲಬ್ಬಿ ಇವರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರರ ಜಯಂತಿ ಅಂಗವಾಗಿ ಸೈಕಲ್ ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮ ಕೈಗೊಳ್ಳಲಾಯಿತು.
ಬಳಿಕ ಸಾಯಂಕಾಲ ಸ್ವಾಮಿ ವಿವೇಕಾನಂದ ಜಯಂತಿಯ ಪೂಜಾ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು, ಈ ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ಬಿ.ಎಂ.ದೊಡ್ಡಮನಿ ಗುರುಗಳು ನಿವೃತ್ತ ಪ್ರಾಧ್ಯಾಪಕರು ಹಾಗೂ ಉದ್ಘಾಟಕರಾಗಿ ಸ.ಸ ಡಾಕ್ಟರ್, ಎ.ಸಿ ವಾಲಿ ಗುರುಗಳು ಮಹಾರಾಜರು ಪೀಠಾಧಿಪತಿಗಳು ಕ್ಷೇತ್ರ ಸೀತಾಗಿರಿ ಬಂಡಿವಾಡ, ಮುಖ್ಯ ಅತಿಥಿಗಳು ಮಲ್ಲಿಕಾರ್ಜುನ ಬಾಳಿಕಾಯಿ ನಿರಾಮಯ ಫೌಂಡೇಶನ್ ಸಂಸ್ಥಾಪಕರು ನಿರ್ದೇಶಕರು ಮತ್ತು ಅತಿಥಿಗಳಾಗಿ ಮಹದೇವಪ್ಪ ಬಾಗಣ್ಣವರ, ಪ್ರಗತಿಪರ ರೈತರು, ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಕಾರ್ಯಕರ್ತರಾದ ನಿಂಗಪ್ಪ.ಕೆ. ಎಚ್. ವೇದಿಕೆ ಹಂಚಿಕೊಂಡಿದ್ದರು.
ಈ ವೇಳೆಯಲ್ಲಿ ಮೆಟ್ರಿಕ್ ಹಾಗೂ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Kshetra Samachara
15/01/2021 12:37 pm