ಧಾರವಾಡ: ಧಾರವಾಡ: ಹೊಸ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯನ್ನು ಧಾರವಾಡದ ವಿದ್ಯಾಗಿರಿಯಲ್ಲಿರುವ ಸಿಬಿಎಸ್ ಸಿ ಸ್ಕೂಲ್ ನಲ್ಲಿ ಬುಧವಾರ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಶಾಲೆಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಕಂಗೊಳಿಸಿದರು. ಶಾಲಾ ಆವರಣವನ್ನು ರಂಗೋಲಿಯಿಂದ ಸಿಂಗರಿಸಿದರು.
ಕಬ್ಬು, ಎಳ್ಳು ಬೆಲ್ಲ ಕೊಟ್ಟು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಶಾಲಾ ಆವರಣದಲ್ಲೇ ಈಶ್ವರನ ಪ್ರತಿಮೆ ಮಾಡಿ ಅದಕ್ಕೆ ವಿಶೇಷ ಪೂಜೆ ಕೂಡ ಸಲ್ಲಿಸಿದರು.
Kshetra Samachara
13/01/2021 08:30 pm