ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಜಾನಪದ ಕಲೆ,ಸಂಸ್ಕೃತಿ, ಉಳಿಸಿ ಬೆಳೆಸ ಬೇಕಿದೆ

ಕಲಘಟಗಿ:ಗ್ರಾಮೀಣ ಭಾಗದ ಜಾನಪದ ಮೂಲ ಕಲೆ,ಸಂಸ್ಕೃತಿ,ಪರಂಪರೆ ಉಳಿಸಿ ಬೆಳೆಸಲು ನಾವೆಲ್ಲರೂ ಪ್ರಯತ್ನ ಮಾಡಬೇಕಿದೆ ಎಂದು ಮಾರುಕಟ್ಟೆ ಉಪಾಧ್ಯಕ್ಷ ಕ್ರಷ್ಣ ಕೋಳಿನಟ್ಟಿ ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ಲಿಂಗನಕೊಪ್ಪ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡ ಜನಪದ ಉತ್ಸವ ಉದ್ದೇಶಿಸಿ ಮಾತನಾಡಿದರು.

ಜಾನಪದ ಕಲಾವಿದ ಎಸ್.ಎನ್ ಬಿದರಳ್ಳಿ ಮಾತನಾಡಿ,ಗ್ರಾಮೀಣ ಸೊಗಡು ಉಳಿಸಿ ಬೆಳೆಸುವ ಕಲಾವಿದರನ್ನು ಗೌರವಿಸ ಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಗೊಂಬೆ ಕುಣಿತ,ಜಗ್ಗಲಗಿ ಮೇಳ,ಡೊಳ್ಳು ಕುಣಿತ,ನಾಟಕ,ಜಾನಪದ ನೃತ್ಯ,ದೇಶಭಕ್ತಿ ಗೀತೆ,ನೃತ್ಯಗಳು, ಲಂಬಾಣಿ ನೃತ್ಯ,ಭಜನಾ ಪದಗಳು,ಸುಗಮ ಸಂಗೀತ ಪ್ರದರ್ಶನಗೊಂಡವುಗ್ರಾ.ಪಂ ಸದಸ್ಯ ಬಸವರಾಜ ನೇಸರಗಿ ಅಧ್ಯಕ್ಷತೆ ವಹಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ,ಅನಸವ್ವ ಪಾಟೀಲ,ನಿಂಗವ್ವ ದೇವಗಿರಿ, ಪಕ್ಕೀರಪ್ಪ ನಡುವಿನಮನಿ,ಎಂ.ಎಫ್ ದಾಸ್ತಿಕೊಪ್ಪ,ಕಲ್ಲಪ್ಪ ಸುಳ್ಳದ,ಹನಮಂತಪ್ಪ ಕಾಳೆ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

09/01/2021 08:58 pm

Cinque Terre

21.34 K

Cinque Terre

0

ಸಂಬಂಧಿತ ಸುದ್ದಿ