ಕಲಘಟಗಿ: ಪಟ್ಟಣದಲ್ಲಿ ರುಸ್ತುಂ ಸೈಯದ್ ದರ್ಗಾದಲ್ಲಿ ಮೊಹರಂ ಹಬ್ಬವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿ ಮುಂಜಾನೆ ಅಗ್ನಿಯಲ್ಲಿ ದೇವರ ಹೋತ್ತ ಯುವಕರು ಅಗ್ನಿಪ್ರವೇಶ ಮಾಡುತ್ತಾರೆ. ನಂತರ ದೇವರುಗಳು ಹೊಳೆಗೆ ಹೋಗುತ್ತವೆ.
ಈ ದರ್ಗಾದಲ್ಲಿ ಒಂದು ದೊಡ್ಡ ಮರವೊಂದಿದೆ. ಮೊದಲು ಈ ಹಬ್ಬದ ಸಂದರ್ಭದಲ್ಲಿ ಈ ಮರದಿಂದ ಸಕ್ಕರೆ ಬೀಳುತ್ತಿತ್ತು ಎಂದು ಇಲ್ಲಿಯ ಪ್ರತೀತಿ ಇದೆ. ಈ ದರ್ಗಾದಲ್ಲಿ ಹಿಂದುಗಳು ಕೂಡ ಬಂದು ಪೂಜೆ ಸಲ್ಲಿಸುವುದು ವಿಶೇಷವಾಗಿದೆ.
ಆದರೆ ಈ ಬಾರಿ ಸತತ ಮಳೆಯಿಂದಾಗಿ ಕೆಲವೊಂದು ಆಚರಣೆ ಮಾಡಲಾಗಿಲ್ಲ ಆದರೆ ಇಂತಹ ಮಳೆಯಲ್ಲಿಯೂ ಕೂಡ ಬಕ್ತರು ದೇವರ ಹೊತ್ತು ನಿಂತಿರುವ ದೃಶ್ಯ ಕಂಡುಬಂದಿತು.
Kshetra Samachara
09/08/2022 01:04 pm