ಹುಬ್ಬಳ್ಳಿ: ಆಷಾಢ ಮಾಸದ ಪ್ರಯುಕ್ತ ಆನಂದ ನಗರದಲ್ಲಿರುವ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ, ಭಂಡಾರ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಉತ್ಸವದಲ್ಲಿ 75 ಮುತ್ತೈದೆಯರಿಗೆ ಉಡಿ ತುಂಬಿದರು. ಮಹಿಳೆಯರು ದೇವರ ಶ್ಲೋಕಗಳನ್ನು ಹೇಳಿದರು. ಡೊಳ್ಳು ಮೇಳದಿಂದ ಪಲ್ಲಕ್ಕಿ ಉತ್ಸವ ಮಾಡಿದರು. ಸಾವಿರಾರು ಭಕ್ತರು ಭಾಗವಹಿಸಿ ಶ್ರೀ ಅಂಬಾಭವಾನಿ ದೇವಿಯ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.
Kshetra Samachara
27/07/2022 06:54 pm