ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಉಡಚಮ್ಮಾದೇವಿ ಜಾತ್ರೆ ಮಂಗಳಾರತಿ ಮಹಿಳೆಯರಿಗೆ ಉಡಿ

ಕುಂದಗೋಳ: ತಾಲೂಕಿನ ಯರೇಬೂದಿಹಾಳ ಗ್ರಾಮದಲ್ಲಿ ಭಕ್ತಿ ಸಾಕ್ಷಾತ್ಕಾರಕ್ಕೆ ಸಾಕ್ಷಿಯಾದ ತಾಯಿ ಉಡಚಮ್ಮಾದೇವಿ ಮೂರ್ತಿ ಪ್ರತಿಷ್ಠಾಪನೆ ಕಳಸಾರೋಹಣ ಮಂಗಳಾರತಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಹೌದು ! ಶುಕ್ರವಾರ ತಾಯಿ ಉಡಚಮ್ಮಾದೇವಿಯೂ ಭಕ್ತ ಸಂಕುಲಕ್ಕೆ ದರ್ಶನ ನೀಡಿದಳು, ಯರೇಬೂದಿಹಾಳ ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಯ ಭಕ್ತಾಧಿಗಳು ವಿಶೇಷವಾಗಿ ಮಹಿಳಾ ಭಕ್ತರು ಆಗಮಿಸಿ ತಾಯಿ ಉಡಚಮ್ಮಾದೇವಿ ಹೆಸರಲ್ಲಿ ಉಡಿ ತುಂಬಿಕೊಂಡು ಜಾತ್ರಾ ಸವಿ ಸವಿದರು.

ಕಳೆದ ಮೂರು ದಿನಗಳಿಂದ ಜಾತ್ರಾಯಲ್ಲಿ ಶುಕ್ರವಾರ ಸಂಜೆಯ ವೇದಿಕೆಯಲ್ಲಿ ಜೀ ಕನ್ನಡ ಸರಿಗಮಪ ಖ್ಯಾತಿಯ ಮೆಹಬೂಬಸಾಬ್ ಗಾಯನ ಭಕ್ತಿ ರಸದೌತಣ ನೀಡಿತು. ವಿವಿಧ ಮಠಾಧೀಶರ ಸಮ್ಮುಖದಲ್ಲಿ ದೀಪ ಬೆಳಗಿಸಿ ಆಧ್ಯಾತ್ಮಿಕ ಪ್ರವಚನ ಏರ್ಪಡಿಸಿ ಧಾರ್ಮಿಕ ನೆಲೆಗಟ್ಟನ್ನು ವಿವರಿಸಲಾಯಿತು. ಜಾತ್ರೆಗೆ ಬಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.

Edited By : Somashekar
Kshetra Samachara

Kshetra Samachara

14/05/2022 05:59 pm

Cinque Terre

63.36 K

Cinque Terre

0

ಸಂಬಂಧಿತ ಸುದ್ದಿ