ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಉಪ್ಪಿನ ಬೆಟಗೇರಿಯಲ್ಲಿ ಎರಡನೇ ದಿನವೂ ಮನೆ ಮಾಡಿದ ಹೊನ್ನಾಟದ ಸಂಭ್ರಮ

ಧಾರವಾಡ: 21 ವರ್ಷಗಳ ಬಳಿಕ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಗ್ರಾಮ ದೇವಿಯರ ಜಾತ್ರೆ ನಡೆಯುತ್ತಿದ್ದು, ಎರಡನೇ ದಿನವಾದ ಭಾನುವಾರವೂ ಹೊನ್ನಾಟದ ಸಂಭ್ರಮ ಮನೆ ಮಾಡಿತ್ತು.

ಹೊನ್ನಾಟದ ಎರಡನೇ ದಿನವಾದ ಭಾನುವಾರ ಗ್ರಾಮ ದೇವಿಯರ ದೇವಸ್ಥಾನದಿಂದ ದ್ಯಾಮವ್ವ ಹಾಗೂ ದುರ್ಗಾದೇವಿಯ ಮೂರ್ತಿಯನ್ನು ಮೆರವಣಿಗೆ ಮೂಲಕ ಹನುಮನಕೊಪ್ಪ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಮೆರವಣಿಗೆಯುದ್ದಕ್ಕೂ ಭಂಡಾರ ಎರಚಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಜನ ಭಂಡಾರದಲ್ಲಿ ಮಿಂದೆದ್ದರು. ಡೊಳ್ಳು ಕುಣಿತದವರು, ನಗಾರಿ ಬಾರಿಸುವವರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹೆಣ್ಣು ಮಕ್ಕಳೂ ಸಹ ಡಿಜೆ ಹಾಡಿಗೆ ಹೆಜ್ಜೆ ಹಾಕಿ, ಪರಸ್ಪರ ಭಂಡಾರ ಎರಚಿ ಸಂಭ್ರಮಿಸಿದರು.

ಹನುಮನಕೊಪ್ಪದಲ್ಲಿ ದೇವಿಯರ ಮೂರ್ತಿಯನ್ನು ಅನೇಕ ಗಂಟೆಗಳ ಕಾಲ ಇಡಲಾಯಿತು. ಹೆಣ್ಣು ಮಕ್ಕಳು ಅಲ್ಲಿಗೆ ಬಂದು ದೇವಿಯರಿಗೆ ಉಡಿ ತುಂಬಿದರು. ನಂತರ ಅಲ್ಲಿಂದ ಮೂರ್ತಿಗಳನ್ನು ಮತ್ತೆ ಹೊನ್ನಾಟ ಆಡುತ್ತ ಹನುಮನಕೊಪ್ಪ ಗ್ರಾಮದ ವಿವಿಧ ದೇವಸ್ಥಾನಗಳಿಗೆ ಕೊಡೊಯ್ಯಲಾಯಿತು. ಹೀಗೆ ಕೊಂಡೊಯ್ಯುವ ವೇಳೆ ದೇವಿಯರ ಮೂರ್ತಿ ಹೊತ್ತವರು ಹನುಮನಕೊಪ್ಪ ಅಗಸಿಯಲ್ಲಿ ನಾಲ್ಕೈದು ಬಾರಿ ಮೂರ್ತಿ ಹೊತ್ತುಕೊಂಡೇ ಸುತ್ತು ಹೊಡೆದದ್ದು ಗಮನಸೆಳೆಯಿತು. ದೇವಿಯರ ಮೂರ್ತಿ ಹೊತ್ತವರ ಕೈಯಲ್ಲಿ ಏನೂ ಇರುವುದಿಲ್ಲ. ದೇವಿ ಹೇಗೆ ಪ್ರೇರೇಪಣೆ ನೀಡುತ್ತಾಳೋ ಆ ರೀತಿ ಮೂರ್ತಿಗಳು ಸಾಗುತ್ತವೆ ಎಂಬ ನಂಬಿಕೆ ಇದೆ.

ಒಟ್ಟಾರೆಯಾಗಿ ಹೊನ್ನಾಟದ ಎರಡನೇ ದಿನವಾದ ಭಾನುವಾರವೂ ಈ ಭಂಡಾರದ ಜಾತ್ರೆ ಅದ್ಧೂರಿಯಿಂದ ನೆರವೇರಿತು. ಜಾತ್ರೆಗೆಂದು ಬರುವ ಬೇರೆ ಊರಿನವರಿಗೂ ಹಾಗೂ ಉಪ್ಪಿನ ಬೆಟಗೇರಿ ಗ್ರಾಮಸ್ಥರಿಗೂ ಹೈಸ್ಕೂಲ್ ಮೈದಾನದಲ್ಲಿ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

Edited By : Nagesh Gaonkar
Kshetra Samachara

Kshetra Samachara

08/05/2022 08:52 pm

Cinque Terre

53.15 K

Cinque Terre

3

ಸಂಬಂಧಿತ ಸುದ್ದಿ