ನವಲಗುಂದ : ನವಲಗುಂದ ಪಟ್ಟಣದ ಕುರುಬರ ಓಣಿಯಲ್ಲಿರುವ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ನೆರೆದ ಜನರು ಬೆರಗಾಗುವಂತೆ ಅದ್ದೂರಿ ಶಕ್ತಿ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಚಿಲಕವಾಡ ಗ್ರಾಮದ ಸೀನಪ್ಪ ಬೀರನ್ನವರ ಉಸುಕಿನ ಕೊಡ ಹೊತ್ತು ಶಕ್ತಿಯನ್ನು ಪ್ರದರ್ಶಿಸಿದರು.
45 ಕೆಜಿ ತುಂಬಿದ ಕೊಡವನ್ನು ಕೈಗಳ ಸಹಾಯವಿಲ್ಲದೇ ಕಾಲಿನ ಬೆರಳಿನಿಂದ ಮೇಲಕ್ಕೆತ್ತಿ ಹೆಗಲಮೇಲೆ ಹೊತ್ತುಕೊಂಡರು. ಕೈಗಳ ಸಹಾಯವಿಲ್ಲದೆ ಕೊಡದ ಕೆಳಗೆ ಬನಿಯನ್ ತೆಗೆದುಹಾಕಿ ದೀಡನಮಸ್ಕಾರ ಹಾಕಿದರು. ಈ ವೇಳೆ ನೆರೆದ ಭಕ್ತರು ಕೇಕೆ ಶಿಳ್ಳೆ ಹಾಕಿ ಸೀನಪ್ಪನಿಗೆ ಹುರಿದುಂಬಿಸಿದರು. ಅವರ ಶಕ್ತಿಯನ್ನು ಕಂಡು ಪ್ರೇಕ್ಷಕರು ನಿಬ್ಬೆರಗಾದರು. ಶಕ್ತಿ ಪ್ರದರ್ಶನದಲ್ಲಿ ಕರಡಿಮಜಲು ಹಾಗೂ ವಿವಿಧ ಯುವಕರಿಂದ ಸಾಥ ನೀಡಲಾಯಿತು.
Kshetra Samachara
04/05/2022 08:47 am