ಕಲಘಟಗಿ: ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ಶನಿವಾರ ಶ್ರೀರಾಮನವಮಿ ಹಾಗೂ ಹನುಮ ಜಯಂತಿ ಅಂಗವಾಗಿ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಪಲ್ಲಕ್ಕಿ ಮೆರವಣಿಗೆಯನ್ನು ಗ್ರಾಮಸ್ಥರು ಭಕ್ತಿ ಭಾವದಿಂದ ಸ್ವಾಗತಿಸಿದರು. ಪಲ್ಲಕ್ಕಿಗೆ ವಿಶೇಷ ಪೂಜೆ ಸಲ್ಲಿಸಿದರು. ಪಲ್ಲಕ್ಕಿ ಆಗಮಿಸುವ ರಸ್ತೆಯನ್ನು ರಂಗೋಲಿ ಹಾಕಿ ಶೃಂಗರಿಸಿದ್ದರು.
ಡೊಳ್ಳು, ಝಾಂಜ್ ಸೇರಿದಂತೆ ಅನೇಕ ಕಲಾ ತಂಡಗಳು ಮೆರವಣಿಗೆ ಮೆರಗು ಹೆಚ್ಚಿಸಿದವು. ಮೆರವಣಿಗೆಯೂದ್ದಕ್ಕೂ ಕೇಸರಿ ಧ್ವಜಗಳು ರಾರಾಜಿಸಿದವು.
ಇದಕ್ಕೂ ಮುನ್ನ ಗ್ರಾಮದ ಹನುಮಂತನ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಗ್ಗೆಯಿಂದಲೇ ಹನುಮಾನ ದೇವಾಲಯಕ್ಕೆ ತೆರಳಿದ ಸಾವಿರಾರು ಸಂಖ್ಯೆ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿ ಹನುಮಂತನ ದರ್ಶನಾಶೀರ್ವಾದ ಪಡೆದು ಭಕ್ತಿ ಸಮರ್ಪಿಸಿದರು.
ಅಭಿಷೇಕ, ಎಲಿಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು. ಜನರು ಭಕ್ತಿ ಭಾವದಿಂದ ಹನುಮಂತನನ್ನು ನೆನೆದರು. ಭಗವಾನ ಹನುಮಂತ ಅವರ ಕುರಿತಾದ ಭಕ್ತಿಗೀತೆಗಳು ಎಲ್ಲೆಡೆ ಮೊಳಗಿದವು. ಹನುಮಂತ ಹನುಮಂತ , ಪವಮಾನ ಪವಮಾನ ಜಗದ ಪ್ರಾಣ, ಜೈ ಹೋ ಪವನ ಕುಮಾರ ಎಂದೆಲ್ಲೆ ಹಾಡಿ ಹೊಗಳುವ ಮೂಲಕ ಭಕ್ತಿ ಸಮರ್ಪಣೆ ಮೆರೆದರು.
Kshetra Samachara
16/04/2022 06:32 pm