ಧಾರವಾಡ: ಮಹಿಳಾ ಮಣಿಗಳು ತೆಲೆಯ ಮೇಲೆ ಕುಂಭ ಮೇಳ ಹೊತ್ತು ಊರಿನ ತುಂಬಾ ಕುಂಭ ಮೇಳದ ಜೊತೆಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ, ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ. ಹೌದು ಧಾರವಾಡ ತಾಲೂಕಿನ ಮನಸೂರ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಹನುಮಾನ್ ಜಯಂತಿ ಆಚರಣೆ ನಡೆಸಿದ್ದಾರೆ.
ಮನಸೂರ ಊರಿನ ಗುರುಹಿರಿಯರ ಸಮ್ಮುಖದಲ್ಲಿ ಬಾರಿ ಅದ್ದೂರಿಯಾಗಿ ಹನುಮಾನ್ ಜಯಂತಿ ಆಚರಣೆ ಮಾಡಿದ್ದಾರೆ. ಹೌದು, ಚಕ್ಕಡಿ ಬಂಡೆಯಲ್ಲಿ ರಥ ನಿರ್ಮಾಣ ಮಾಡಿ ಆಂಜನೇಯ ಸ್ವಾಮಿ ಭಾವಚಿತ್ರ ರಥೋತ್ಸವದಲ್ಲಿ ಇಟ್ಟು ಸಾವಿರಾರು ಜನಸ್ತೋಮದ ನಡುವೆ ಗ್ರಾಮದ ತುಂಬಾ ಮೆರವಣಿಗೆ ನಡಿಸಿ, ವಿಶೇಷವಾಗಿ ಜಯಂತಿ ಆಚರಣೆ ಮಾಡಿದ್ದಾರೆ.
ಬಜರಂಗ ಬಲಿ ರಥೋತ್ಸವದ ಮುಂದಗಡೆ ಮಹಿಳಾ ಮಣಿಗಳ ಕುಂಭ ಹೊತ್ತು ಮೆರವಣಿಗೆ ನಡಿಸಿದರೆ, ಮತೊಂದು ಕಡೆ ಮಹಿಳೆಯರಿಂದ ಡೊಳ್ಳಿನ ಮೇಳ ನಡೆಯಿತು. ಈ ಮಹಿಳೆಯರ ಡೊಳ್ಳು ಕುಣಿತ ನೋಡುಗರ ಗಮನ ಸೆಳೆದಿದೆ.
Kshetra Samachara
16/04/2022 06:10 pm