ನವಲಗುಂದ : ಕೋವಿಡ್ ನಿಯಂತ್ರಣದ ಬಳಿಕ ನವಲಗುಂದ ತಾಲೂಕಿನ ಜನರಲ್ಲಿ ಖುಷಿಯ ಭಾವನೆ ಮೂಡಿದ್ದು, ಹಬ್ಬಗಳಲ್ಲಿ ಸಂಭ್ರಮ, ಸಡಗರದಿಂದ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಪ್ರಸಿದ್ಧ ಹಬ್ಬವೆನಿಸಿರುವ ಮಣ್ಣೆತ್ತಿನ ಅಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸಲು ಮುಂದಾಗಿದ್ದರು.
ಹೌದು ಮಣ್ಣೆತ್ತಿನ ಅಮಾವಾಸ್ಯೆಯ ನಿಮಿತ್ತ ಮಣ್ಣಿನಿಂದ ಮಾಡಿರುವ ಜೋಡೆತ್ತುಗಳನ್ನು ನಾಲ್ಕು ವಾರಗಳು ಇರಿಸಿ ವಿವಿಧ ರೀತಿಯ ಪೂಜೆಗಳನ್ನು ನೆರವೇರಿಸಿ, ಐದನೇ ವಾರಕ್ಕೆ ಚಕ್ಕಡಿಯಲ್ಲಿ ಇರಿಸಿ ಮೆರವಣಿಗೆ ಮಾಡಲಾಗುವುದು, ಈ ಹಿನ್ನಲೆಯಲ್ಲಿ ಬುಧವಾರ ಪಟ್ಟಣದ ಹಲವೆಡೆ ಮೆರವಣಿಗೆ ಮಾಡುವ ಮೂಲಕ ಸಾರ್ವಜನಿಕರು ಸಂತಸ ಪಟ್ಟರು.
Kshetra Samachara
05/08/2021 04:15 pm