ನವಲಗುಂದ : ತಾಲೂಕಿನ ಬೆಳವಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಸಹಾಯಕರಿಗೆ, ಅಂಗನವಾಡಿ ಶಿಕ್ಷಕಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ತಾ. ಪಂ. ಉಪಾಧ್ಯಕ್ಷ ಕಡದಳ್ಳಿ ಕಲ್ಲಪ್ಪ ಅವರು ಉಚಿತವಾಗಿ ಸೀರೆ ಹಾಗೂ ಟಿಫಿನ್ ಬಾಕ್ಸ್ ಗಳನ್ನು ವಿತರಿಸಿದರು.
ಈ ಸಂಧರ್ಭದಲ್ಲಿ ಸರೋಜಾ ಜಂತ್ಲಿ, ಗೀತಾ ಕುಲಕರ್ಣಿ, ಮಂಜುಳಾ ಐದಮನಿ, ಆಶಾರಾಣಿ ಶೆಟ್ಟನವರ, ವಿದ್ಯಾ ಕೆಳಗೇರಿ, ಲಕ್ಷ್ಮವ್ವ ತಳವಾರ, ಕಮಲವ್ವ ಜಾಲಗಾರ, ಪ್ರಧಾನ ಗುರುಗಳಾದ ಪಿ.ಸಿ ಸೂರಪ್ಪನವರ, ಶಿವು ಪೂಜಾರ, ಮಂಜುನಾಥ ಗಾಣಿಗೇರ, ಸುಭಾಷ ಮೇತ್ರಿ ಸೇರಿದಂತೆ ಹಲವರು ಇದ್ದರು.
Kshetra Samachara
24/01/2022 09:25 pm