ನವಲಗುಂದ : ಭಾನುವಾರ ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘ ಹಾಗೂ ಕರ್ನಾಟಕ ಪಿಂಜಾರ ನದಾಫ ಮನ್ಸೂರಿ ಸಂಘಗಳ ಸಹಯೋಗದಲ್ಲಿ ಸಸಿ ನಡೆಸಿ, ಚಿಕ್ಕ ಮಕ್ಕಳಿಂದ ನೀರು ಹಾಕುವುದರ ಮೂಲಕ ನೇತಾಜಿ ಸುಭಾಷ ಚಂದ್ರ ಭೋಸ್ ಅವರ 125 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ರೈತ ಮುಖಂಡ ಬಸನಗೌಡ ಪಾಟೀಲ ಮಾತನಾಡಿ, ಸ್ವಾತಂತ್ರ್ಯಕ್ಕಿಂತ ಮೊದಲು ಭಾರತ ದೇಶದಲ್ಲಿರುವ ಬ್ರೀಟಿಷರನ್ನು ಬಗ್ಗು ಬಡೆಯಲು ಹಲವಾರು ದೇಶ ಪ್ರೇಮಿಗಳು ತಮ್ಮ ಪ್ರಾಣವನ್ನು ಕೊಟ್ಟಿದ್ದಾರೆ. ಅಂತವರಲ್ಲಿ ನೇತಾಜಿ ಸುಭಾಷ ಚಂದ್ರ ಬೋಸ್ ಅವರು ಪ್ರಮುಖರಾಗಿದ್ದಾರೆ. ಅವರ ದೇಶ ಪ್ರೇಮ ಇಂದಿನ ಯುವಕರಿಗೆ ಮಾರ್ಗದರ್ಶನವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಂಜಾರ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಅಬ್ದುಲರಝಾಕ ನದಾಫ, ಪುಂಡಲೀಕ ಮುಧೋಳೆ, ಅಂದಪ್ಪ ಬಳ್ಳೂಳ್ಳಿ, ಶಶಿಧರ ಶಲವಡಿ, ಚನಬಸಪ್ಪ್ಪ ಈಟಿ ಸೇರಿದಂತೆ ಇತರರು ಇದ್ದರು.
Kshetra Samachara
23/01/2022 09:42 pm